ADVERTISEMENT

ಅಫಜಲಪುರ | ಸೋರುವ ಶಾಲೆಗಳು: ಮಕ್ಕಳ ಪರದಾಟ

ಶಿವಾನಂದ ಹಸರಗುಂಡಗಿ
Published 13 ಆಗಸ್ಟ್ 2024, 6:00 IST
Last Updated 13 ಆಗಸ್ಟ್ 2024, 6:00 IST
<div class="paragraphs"><p>ಅಫಜಲಪುರ ತಾಲ್ಲೂಕಿನ ಅಳ್ಳಗಿ(ಕೆ) ಸರ್ಕಾರಿ ಶಾಲೆ ಚಾವಣಿ ಸಿಮೆಟ್‌ ಕಳಚಿ ಬಿದ್ದಿರುವುದು</p></div>

ಅಫಜಲಪುರ ತಾಲ್ಲೂಕಿನ ಅಳ್ಳಗಿ(ಕೆ) ಸರ್ಕಾರಿ ಶಾಲೆ ಚಾವಣಿ ಸಿಮೆಟ್‌ ಕಳಚಿ ಬಿದ್ದಿರುವುದು

   

ಅಫಜಲಪುರ: ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ 202 ಶಾಲೆಗಳಿದ್ದು ಅವುಗಳ ಪೈಕಿ 104 ಶಾಲಾ ಕೊಠಡಿಗಳು ಸೋರುತ್ತವೆ. ತಾಲ್ಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಮಕ್ಕಳಿಗೆ ಶಾಲಾ ಕೋಣೆಗಳ ಕೊರತೆಯಿದೆ. ಹೀಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಮಕ್ಕಳು ವ್ಯಾಸಂಗ ಮಾಡಲು
ಪರದಾಡುವಂತಾಗಿದೆ .

ಸೋರುವ ಕೊಠಡಿಗಳ ದುರಸ್ತಿಗಾಗಿ ಜಿ.ಪಂ. ಸಿಇಒ ಕಚೇರಿಗೆ ಕ್ರಿಯಾಯೋಜನೆ ತಯಾರಿಸಿ ಪಟ್ಟಿ ಸಲ್ಲಿಸಬೇಕಾಗಿದೆ. ಅದರಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಅಕ್ಷರ ಆವಿಷ್ಕಾರ ಯೋಜನೆ ಅಡಿಯಲ್ಲಿ ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಲಾಗುತ್ತದೆ. ತಾತ್ಕಾಲಿಕವಾಗಿ ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಲು ತಾಲ್ಲೂಕು ಪಂಚಾಯಿತಿಗೆ ಶಾಲಾ ಕೋಣೆಗಳ ಪಟ್ಟಿ ನೀಡಲು ತಿಳಿಸಿದ್ದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಪಾಟೀಲ್
ಹೇಳಿದ್ದಾರೆ.

ADVERTISEMENT

ಪ್ರತಿ ವರ್ಷ ಮಳೆಗಾಲ ಆರಂಭವಾದಾಗ ಕೋಣೆಗಳು ಸೋರುತ್ತಿರುವಾಗ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಶಾಲೆಗೆ ಭೇಟಿ ಕೊಡುವುದು, ಭರವಸೆ ನೀಡುವುದು ನಡೆಯುತ್ತದೆ. ಆದರೆ ಶಾಶ್ವತವಾಗಿ ಕೋಣೆಗಳ ದುರಸ್ತಿ ಮಾಡುವ ಕೆಲಸ ನಡೆಯುತ್ತಿಲ್ಲ. ಮಳೆ ಬಂದು ಕೋಣೆಗಳು ಸೋರಿದರೆ ಶಾಲೆಗೆ ರಜೆ ಕೊಡುವುದು ಬಿಟ್ಟರೆ ಸರ್ಕಾರ ಬೇರೆ ಕೆಲಸ ಏನೂ ಮಾಡುತ್ತಿಲ್ಲ ಎಂದು ಪಾಲಕರು ಬೇಸರಿಸುತ್ತಾರೆ.

ಜನಪ್ರತಿನಿಧಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಜಿ.ಪಂ. ಸಿಇಒ ಕಳಪೆಮಟ್ಟದ ಶಾಲಾ ಕೋಣೆಗಳನ್ನು ಪರಿಶೀಲನೆ ಮಾಡಬೇಕು. ಕಳಪೆ ಕಾಮಗಾರಿ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಪಾಲಕರು ಆಗ್ರಹಿಸಿದ್ದಾರೆ.

‘ಕೆಲವು ಗ್ರಾಮಗಳಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಇಲಾಖೆಯವರು ಶಾಲಾ ಕೋಣೆ ನಿರ್ಮಾಣ ಮಾಡಿದ್ದು. ಇದುವರೆಗೂ ಉದ್ಘಾಟನೆ ಆಗಿಲ್ಲ. ಶಾಲೆಗೆ ಹಸ್ತಾಂತರವಾಗಿಲ್ಲ. ಹೀಗಾಗಿ ಅವು ಹಾಳಾಗಿ ಹೋಗುತ್ತಿವೆ’ ಎಂದು ತಾಲ್ಲೂಕು ವಕೀಲರ ಸಂಘದ ಸದಸ್ಯ ಸುರೇಶ್ ಅವಟೆ ಹೇಳಿದರು.

ತಾಲ್ಲೂಕಿನ ಬಳೂರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳು ಕಳಪೆ ಕಾಮಗಾರಿಯಿಂದ ಸೋರುತ್ತಿವೆ. ಈ ಬಗ್ಗೆ ಹಲವು ಬಾರಿ ಇಲಾಖೆಯವರಿಗೆ ಕೇಳಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆಮಟ್ಟದ ಶಾಲಾ ಕೋಣೆಗಳನ್ನು ಪರಿಶೀಲನೆ ಮಾಡಬೇಕು. ತಕ್ಷಣ ಮಕ್ಕಳಿಗೆ ವ್ಯಾಸಂಗ ಮಾಡಲು ಶಾಲಾ ಕೋಣೆಗಳನ್ನು ದುರಸ್ತಿ ಮಾಡಬೇಕು ಎಂಬುದು ಪಾಲಕರ
ಆಗ್ರಹವಾಗಿದೆ.

ತಾಲ್ಲೂಕಿನಲ್ಲಿ ಸೋರುತ್ತಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕೋಣೆಗಳನ್ನ ದುರಸ್ತಿ ಮಾಡುತ್ತೇವೆ. ಸಂಪೂರ್ಣ ಹಾಳಾಗಿರುವ ಕೋಣೆಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು
-ಎಂ.ವೈ.ಪಾಟೀಲ, ಶಾಸಕ
ತಾಲ್ಲೂಕಿನಲ್ಲಿ ಶಾಲಾ ಕೋಣೆಗಳ ದುರಸ್ತಿ ಮಾಡುವುದಕ್ಕಾಗಿ ಕ್ರಿಯಾಯೋಜನೆ ತಯಾರಿಸಿ ಸಾಕ್ಷರತಾ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಆದಷ್ಟು ಶೀಘ್ರ ಸೋರುತ್ತಿರುವ ಕೊಠಡಿಗಳನ್ನು ದುರಸ್ತಿ ಮಾಡಲಾಗುವುದು.
-ಜ್ಯೋತಿ ಪಾಟೀಲ, ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.