ಚಿಂಚೋಳಿ: ‘ಮಹಾತ್ಮರ ಹಿತ ವಚನ ಆಲಿಸುವುದು ಮತ್ತು ಅವರು ತೋರಿದ ಸನ್ಮಾರ್ಗದಲ್ಲಿ ಸಾಗುವುದರಿಂದ ಭಕ್ತರಿಗೆ ಜೀವನದಲ್ಲಿ ಶ್ರೇಯಸ್ಸು ಲಭಿಸುತ್ತದೆ’ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಗುರುಪೂರ್ಣಿಮೆಯಲ್ಲಿ ಗುರುಪಾದ ಪೂಜಾ ಕಾರ್ಯಕ್ರಮದ ಬಳಿಕ ಆಶೀರ್ವಚನ ನೀಡಿದರು.
ಮಲ್ಲಯ್ಯ ಶಾಸ್ತ್ರಿ ಐನಾಪುರ ಅವರಿಂದ ಪ್ರವಚನ ನಡೆಯಿತು.
ಕಲಬುರಗಿಯ ಗುರುಕೃಪಾ ಬುಕ್ ಸ್ಟಾಲ್ ಮಾಲೀಕ ಜಯಣ್ಣ ಡೋಲೆ ಪರಿವಾರದಿಂದ ಗುರು ಪಾದಪೂಜೆ ನಡೆಯಿತು. ಇದಕ್ಕೂ ಮೊದಲು ಪೂಜ್ಯರು ಚನ್ನಬಸವ ಶಿಯೋಗಿಗಳ ಕರ್ತಋ ಗದ್ದುಗೆಗೆ ಅಬಿಷೇಕ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸದ್ಭಕ್ತ ಮಂಡಳಿ ಮುಖಂಡರಾದ ಹಾಬಾ(ಟಿ) ಗ್ರಾಮದ ಶಿವಕುಮಾರ ದೇಶಮುಖ, ಬಸವರಾಜ ಬೀರನಳ್ಳಿ, ಭೀಮರಾವ ಸೇಡಂ, ಚನ್ನಬಸಪ್ಪ ಮೀನಹಾಬಾಳ, ಚನ್ನಬಸವ ಹಿರೇಮಠ, ನಾಗರಾಜ ಕಲಬುರಗಿ, ಸುಭಾಷ ಸೀಳಿನ, ರಾಜಶೇಖರ ಮಜ್ಜಗಿ, ಸಂತೋಷ ಕಡಗದ್, ವಿರೂಪಾಕ್ಷಪ್ಪ ಯಂಪಳ್ಳಿ, ಮಲ್ಲಿಕಾರ್ಜುನ ಅಲ್ಲಾಪುರ, ವೀರಶೆಟ್ಟಿ ಅಂಬಲಗಿ, ಕಾಶಿನಾಥ ಹಿರೇಮಠ, ಡಾ. ಸಂಗಮೇಶ ಮಂಡಿ, ಸೂರ್ಯಕಾಂತ ಸಂಗೊಳಗಿ, ವಿಜಯಕುಮಾರ ಸಂಗೊಳಗಿ, ಪಂಡಿತ ಹಾರಕೂಡ, ಚನ್ನಬಸಪ್ಪ ತೋಟಪ, ಪಂಡಿತ ದೇಗಾಂವ್, ರಾಜಕುಮಾರ ದೇಗಾಂವ್, ಶಾಮರಾವ್ ಕೊರವಾರ, ಅಣ್ಣಪ್ಪ ಮಾಸ್ತರ್ ಕಲಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.