ADVERTISEMENT

ಸೇಡಂ | ಅರಿವಿನಲಿ ಆಚಾರವಿರಬೇಕು: ಹಾರಕೂಡ ಶ್ರೀ

ಕೊಂಕನಳ್ಳಿ ಗ್ರಾಮದಲ್ಲಿ ಗುರುವಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 16:17 IST
Last Updated 20 ಸೆಪ್ಟೆಂಬರ್ 2024, 16:17 IST
ಸೇಡಂ ತಾಲ್ಲೂಕು ಕೊಂಕನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಗುರುವಂದನಾ ಕಾರ್ಯಕ್ರಮವನ್ನು ಹಾರಕೂಡದ ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸಿದರು
ಸೇಡಂ ತಾಲ್ಲೂಕು ಕೊಂಕನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಗುರುವಂದನಾ ಕಾರ್ಯಕ್ರಮವನ್ನು ಹಾರಕೂಡದ ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸಿದರು   

ಸೇಡಂ: ತಾಲ್ಲೂಕಿನ ಕೊಂಕನಳ್ಳಿ ಗ್ರಾಮದಲ್ಲಿ ಶುಕ್ರವಾರ ಹಾರಕೂಡ ಚನ್ನವೀರ ಶಿವಾಚಾರ್ಯರರ 176ರನೇ ತುಲಾಭಾರ ಮತ್ತು ಗುರುವಂದನಾ ಕಾರ್ಯಕ್ರಮ ಭಕ್ತಿ ಸಡಗರದಿಂದ ಜರುಗಿತು.

ಗ್ರಾಮದ ಮುಖ್ಯ ರಸ್ತೆಯಿಂದ ಪ್ರಮುಖ ಬೀದಿಗಳ ಮೂಲಕ ಶರಣ ಬಸವೇಶ್ವರ ದೇವಾಲಯದವರೆಗೆ ಚನ್ನವೀರ ಶಿವಾಚಾರ್ಯರರ ಮೆರವಣಿಗೆ ಸಾರೋಟಿನಲ್ಲಿ ಜರುಗಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರ ಕುಂಭ ಮೇಳ ಗಮನ ಸೆಳೆಯಿತು. ಮಹಿಳೆಯರ ಭಕ್ತಿಯ ಭಜನೆ ಹಾಡುಗಳನ್ನು ಹಾಡುತ್ತಾ, ಭಕ್ತಿ ಪರಂಪರೆ ಮೆರೆದರು. ವಿಶೇಷ ಹಲೆಗೆ ವಾಧ್ಯಗಳು ಗಮನ ಸೆಳೆದವು. ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಚನ್ನವೀರ ಶಿವಾಚಾರ್ಯರಿಗೆ ನಾಣ್ಯದಿಂದ ತುಲಾಭಾರ ನಡೆಸಿ, ವಿಶೇಷ ಸತ್ಕರಿಸಿದರು.

ಶುಕ್ರವಾರದಂದು ಮೌನವೃತದಲ್ಲಿ ಡಾ.ಚನ್ನವೀರ ಶಿವಾಚಾರ್ಯರು ಭಕ್ತಿ ಸಂದೇಶ ಬರೆದು ಭಕ್ತರಿಗೆ ಸಂದೇಶ ನೀಡಿದರು. ಸಂದೇಶವನ್ನು ನಿರೂಪಕ ಮಹಿಪಾಲರೆಡ್ಡಿ ಮುನ್ನೂರ ಓದಿ’ಅರಿವಿನಲಿ ಆಚಾರ ರಬೇಕು. ಆಚಾರದಲ್ಲಿ ಅರಿವು ತುಂಬಿರಬೇಕು. ಅರಿವು ಆಚಾರಗಳ ಸಂಗ ತಾಣ ಭಕ್ತಿಯ ತವನಿಧಿಯಾಗಿರುತ್ತದೆ. ಭಕ್ತರು ಭಕ್ತಿಯಿಂದ ಮನಸ್ಶಾಂತಿ ಕಂಡು ಕೊಳ್ಳಬೇಕು’ ಎಂಬ ಸಂದೇಶವನ್ನಿತ್ತರು. ಗ್ರಾಮದ ಮಹಿಳಾ ಸಂಘದ ಸದಸ್ಯರು ಡಾ.ಚನ್ನವೀರ ಶಿವಾಚಾರ್ಯರಿಗೆ ಬೆಳಿಗೆ ಖಡಗ ಹಾಕಿದರು. ಗ್ರಾಮದ ಭಕ್ತರೋರ್ವರು ಬೆಳ್ಳಿ ಉಂಗುರುವನ್ನಿತ್ತರು ಭಕ್ತಿ ಸಮರ್ಪಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಪ್ರಮುಖರಾದ ವೀರಭದ್ರಪ್ಪ ಪಾಟೀಲ, ಜಗದೇವಪ್ಪ ಮಾಲಿ ಪಾಟೀಲ, ಗುರುಲಿಂಗಯ್ಯಸ್ವಾಮಿ, ಬಸವರಾಜ ಶಿವಲಿಂಗಯ್ಯ, ಶಾಮರಾವ ಕಂಠಿ, ಬಸವರಾಜ ಮಠಪತಿ, ಸೋಮಶೇಖರ ಪಾಟೀಲ, ಹಣಮಂತರಾವ ಹೂಗಾರ, ದಂಡಪ್ಪ ಮಂಗಾ, ಅಂಬಾರಾವ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಶರಣು ಸುಭಾಶ್ಚಂದ್ರ, ಗೊಲ್ಲಾಳಪ್ಪ ಜಮಾದರ, ಶಿವಕುಮಾರ ಪಾಟೀಲ, ಚೇತನರಾವ ಪಾಟೀಲ, ಓಂಪ್ರಕಾಶ ಮಠಪತಿ, ಬಾಬುರಾವ ಗದಲೆಗಾಂವ, ಭಗವಂತರಾವ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.