ಯಡ್ರಾಮಿ: ‘ತತ್ವಪಾದಕಾರ ಕಡಕೋಳ ಮಡಿವಾಳಪ್ಪನವರ ಮಠದ ಮುಂದಿನ ಜಾಗದ ರಸ್ತೆ ಪಕ್ಕದಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಕೂಡಲೇ ತೆರವು ಮಾಡಬೇಕು’ ಎಂದುರುದ್ರಮನಿ ಶಿವಚಾರ್ಯ ತಿಳಿಸಿದರು.
ಕಡಕೋಳ ಗ್ರಾಮದ ಮಡಿವಾಳಪ್ಪನವರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ಮತ್ತು ರಥೋತ್ಸವ ನಡೆಸಲು ಜಾಗ ಬಿಡಲಾಗಿತ್ತು. ಆ ಜಾವವನ್ನು ಗ್ರಾಮದ ವ್ಯಕ್ತಿವೊಬ್ಬರು ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ದಾಖಲೆ, ಪರವಾನಗಿ ದಾಖಲೆಗಳು ಇಲ್ಲದೆ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದರು.
ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಡ ಕಟ್ಟಲಾಗುತ್ತಿದ್ದು ಯಾವ ಅಧಿಕಾರಿಯೂ ಇತ್ತ ಗಮನಹರಿಸುತ್ತಿಲ್ಲ. ಜನರಿಗೆ ತೊಂದರೆಯಾಗಿದೆ ಎಂದರು.
ರೇವಣ್ಣಗೌಡ, ಈರಣ್ಣಗೌಡ ಬಿರಾದಾರ, ನಾನಾಗೌಡ ಪಾಟೀಲ, ಮೌನೇಶ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಅಯ್ಯಣ್ಣಗೌಡ, ಶಂಕರಗೌಡ, ಈರಣ್ಣಗೌಡ ಶರಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.