ಕಲಬುರಗಿ: ಹೈದರಾಬಾದ್-ಕಲಬುರಗಿ ಮಾರ್ಗದ ಕಮಲಾಪುರ ಹೊರವಲಯದ ಚಾರ್ ಕಮಾನ್ ಬಳಿ ಶುಕ್ರವಾರ ಬೆಳಿಗ್ಗೆ ಖಾಸಗಿ ಸಂಸ್ಥೆಯ ಬಸ್ ಮತ್ತು ಟೆಂಪೊ ಮಧ್ಯೆ ಡಿಕ್ಕಿ ಸಂಭವಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಏಳು ಜನ ಸಾವನ್ನಪ್ಪಿದ್ದಾರೆ.
‘ತೆಲಂಗಾಣ ರಾಜ್ಯದ ಸಿಕಂದರಬಾದ್‌ನ ಅರ್ಜುನ್ (37), ಸರಳಾದೇವಿ ಅರ್ಜುನ್ (32), ವಿವಾನ್ ಅರ್ಜುನ (2), ಶಿವಕುಮಾರ (35), ರವಾಲಿ ಶಿವಕುಮಾರ (30), ದಿಕ್ಷಿತ್ ಶಿವಕುಮಾರ (9) ಮತ್ತು ಅನಿತಾ ರಾಜು (40) ಮೃತಪಟ್ಟಿದ್ದಾರೆ’ ಎಂದು ಕಮಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಸಿಕಂದರಾಬಾದ್‌ನ ಅರ್ಜುನ್ ಸೇರಿ ಕುಟುಂಬದ 30 ಸದಸ್ಯರ ಜೊತೆಗೆ ಗೋವಾಕ್ಕೆ ತೆರಳಿದ್ದರು. ಮೇ 28ರಂದು ಸಿಕಂದರಾಬಾದ್‌ನಿಂದ ಹೊರಟ ಅವರು ಮೂರು ದಿನ ಗೋವಾದಲ್ಲಿ ಇದ್ದರು. ಜೂನ್ 2ರ ಸಂಜೆ ಅಲ್ಲಿಂದ ಹೊರಟರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
22 ಜನರನ್ನು ಬಸ್‌ನಿಂದ ಹೊರ ಬಂದಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಟೆಂಪೊ ಚಾಲಕನ ಎರಡೂ ಕಾಲುಗಳು ತುಂಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಕಲಬುರಗಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರು ಹೈದರಾಬಾದ್ ನಿವಾಸಿಗಳು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.