ADVERTISEMENT

ರೈತರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಕ್ರಮ: ಅನಸೂಯಾ ಹೂಗಾರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:16 IST
Last Updated 30 ಜೂನ್ 2024, 14:16 IST
ಚಿತ್ತಾಪುರ ಪಟ್ಟಣದಲ್ಲಿರುವ ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿಗಳಿಗೆ ಈಚೆಗೆ ಸೇಡಂ ಉಪ ವಿಭಾಗದ ಉಪ ಕೃಷಿ ನಿರ್ದೇಶಕರಾದ ಅನಸೂಯಾ ಹೂಗಾರ ಅವರ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.
ಚಿತ್ತಾಪುರ ಪಟ್ಟಣದಲ್ಲಿರುವ ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿಗಳಿಗೆ ಈಚೆಗೆ ಸೇಡಂ ಉಪ ವಿಭಾಗದ ಉಪ ಕೃಷಿ ನಿರ್ದೇಶಕರಾದ ಅನಸೂಯಾ ಹೂಗಾರ ಅವರ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.   

ಚಿತ್ತಾಪುರ: ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ನಿಗದಿತ ದರದಲ್ಲೇ ಮಾರಾಟ ಮಾಡಬೇಕು. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ಸೂಕ್ತ ಕ್ರಮ ಜರುಗಿಸಿ ಪರವಾನಗಿ ರದ್ದು ಮಾಡಲಾಗುವುದು ಎಂದು ಸೇಡಂ ಉಪ ಕೃಷಿ ನಿರ್ದೇಶಕಿ ಅನಸೂಯಾ ಹೂಗಾರ ಅವರು ಕೃಷಿ ಪರಿಕರ ಮಾರಾಟ ಅಂಗಡಿಗಳ ಮಾಲೀಕರಿಗೆ ಎಚ್ಚರಿಸಿದರು.

‘ಈಚೆಗೆ ಪಟ್ಟಣದ ಇಂಡಿಯನ್ ಆಗ್ರೋ ನೀಡ್ಸ್, ವಿಶ್ವಗುರು ಟ್ರೇಡರ್ಸ್, ಭವಾನಿ ಆಗ್ರೋ ಸೇಲ್ಸ್ ಮಾರಾಟ ಮಳಿಗಳಿಗೆ ಭೇಟಿ ನೀಡಿದ ಅವರು, ‘ಬಿಲ್ಲು ಪುಸ್ತಕ, ರೇಟ್ ಬೋರ್ಡ್, ಫಾರಂ ನಂಬರ ‘ಒ’ ಪರಿಶೀಲಿಸಿದರು. ‌

ನಂತರ ರಸಗೊಬ್ಬರ ಮತ್ತು ಕೀಟನಾಶಕಗಳ ವಿಶ್ಲೇಷಣೆಗಾಗಿ ಅವುಗಳ ಮಾದರಿ ಪಡೆದುಕೊಂಡರು. ಅಂಗಡಿಗಳಲ್ಲಿ ಕೃಷಿ ಪರಿಕರ ತಪಾಸಣೆ ಸಮಯದಲ್ಲಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.