ADVERTISEMENT

ದೇವರ ಸ್ಮರಣೆಗೆ ಉಪವಾಸ ಪೂರಕ: ಇಫ್ತಿಯಾರ್ ಕೂಟ ಆಯೋಜನೆ

ರಂಜಾನ್ ಪ್ರಯುಕ್ತ ವಿವಿಧೆಡೆ ಇಫ್ತಿಯಾರ್ ಕೂಟ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 6:25 IST
Last Updated 24 ಏಪ್ರಿಲ್ 2022, 6:25 IST
ಆಳಂದ ಪಟ್ಟಣದ ದಾರಲೂಮ್‌ನಲ್ಲಿ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಹಮ್ಮಿಕೊಂಡ ಇಫ್ತಾರ್ ಕೂಟ
ಆಳಂದ ಪಟ್ಟಣದ ದಾರಲೂಮ್‌ನಲ್ಲಿ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಹಮ್ಮಿಕೊಂಡ ಇಫ್ತಾರ್ ಕೂಟ   

ಚಿಂಚೋಳಿ: ‘ದೇವನೊಬ್ಬನೇ ನಾಮ ಹಲವು ಎನ್ನುವಂತೆ ಅಲ್ಲಾ, ಶಿವ, ಏಸು, ಪೈಗಂಬರ್, ಬುದ್ದ ಬಸವ ಮೊದಲಾದವರ ಸಂದೇಶ ಮಾನವನ ಆತ್ಮೋನ್ನತಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ತಿಳಿಸಿದರು.

ಇಲ್ಲಿನ ಬಸ್ ನಿಲ್ದಾಣ ಬಳಿಯ ಮಸ್ಜೀದ್ ಎ ಹೂಡಾದಲ್ಲಿ ರಂಜಾನ್ ಮಾಸಾಚರಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಇಫ್ತಾರ್ ಕೂಟದಲ್ಲಿ ಮಾತನಾಡಿದರು.

ಬಡಿ ದರ್ಗಾದ ಸಜ್ಜಾದರಾ ಸಯ್ಯದ್ ಅಕ್ಬರ್ ಹುಸೇನಿ ಸಾನಿಧ್ಯವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಮಹಿಮೂದ್ ಪಟೇಲ್, ಮಹಮದ್ ಖುದ್ದುಸ್, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಚಿತ್ರಶೇಖರ ಪಾಟೀಲ, ಮಲ್ಲಿಕಾರ್ಜುನ ಭೂಶೆಟ್ಟಿ, ಗೋಪಾಲರಾವ್ ಕಟ್ಟಿಮನಿ, ಸುದರ್ಶನರೆಡ್ಡಿ ಪಾಟೀಲ, ಸಯ್ಯದ್ ಶಬ್ಬೀರ್, ಅಯ್ಯುಬ್ ಖಾನ್, ಜಗನ್ನಾಥ ಗುತ್ತೇದಾರ, ಅಬ್ದುಲ್ ಬಾಷೀತ್, ಡಾ. ತುಕಾರಾಮ ಪವಾರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.