ಕಲಬುರಗಿ: ಅಫಜಲಪುರ ತಾಲ್ಲೂಕಿನ ಭೀಮಾ ನದಿ ಪಾತ್ರದಲ್ಲಿ ಅಕ್ರಮವಾಗಿ ತೆಗೆಯಲಾದ ₹ 7.50 ಲಕ್ಷ ಮೌಲ್ಯದ ಮರಳು ಸಂಗ್ರಹ ಅಡ್ಡೆಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಮರಳು ಸಂಗ್ರಹಿಸಿ ಇರಿಸಿದ ಆರೋಪದಡಿ ಏಳು ಮಂದಿ ಜಮೀನು ಮಾಲೀಕರ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ.
ದೇಸಾಯಿ ಕಲ್ಲೂರ ಗ್ರಾಮದ ಜಮೀನಿನಲ್ಲಿ ₹ 2.70 ಲಕ್ಷ ಮೌಲ್ಯದ 135 ಟ್ರ್ಯಾಕ್ಟರ್‌ನಷ್ಟು ಮರಳು ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಗುಡ್ಡೇವಾಡಿ ಗ್ರಾಮದ ಮೂರು ಜಮೀನುಗಳಲ್ಲಿ ₹ 4 ಲಕ್ಷ ಮೌಲ್ಯದ 200 ಟ್ರ್ಯಾಕ್ಟರ್ ಹಾಗೂ ಘತ್ತರಗಾ ಗ್ರಾಮದ ಜಮೀನೊಂದರಲ್ಲಿ ₹ 80 ಸಾವಿರ ಮೌಲ್ಯದ 40 ಟ್ರ್ಯಾಕ್ಟರ್‌ಗಳಷ್ಟು ಮರಳು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಮಹಿಬೂಬ್ ಅಲಿ, ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಜಶೇಖರ ರಾಠೋಡ, ಮಹೇಶ ಕಾನ್‌ಸ್ಟೆಬಲ್‌ಗಳಾದ ಇಮಾಮ್, ಮಹೇಶ ಪಾಟೀಲ, ವಿಶ್ವನಾಥ ಅವರು ದಾಳಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.