ADVERTISEMENT

ಅಫಜಲಪುರ: 78ನೇ  ಸ್ವಾತಂತ್ರ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 4:18 IST
Last Updated 16 ಆಗಸ್ಟ್ 2024, 4:18 IST
ಅಫಜಲಪುರದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್‌ ಸಂಜೀವಕುಮಾರ ದಾಸರ ಧ್ವಜಾರೋಹಣ ನೆರವೇರಿಸಿದರು. ಶಾಸಕ ಎಂ.ವೈ.ಪಾಟೀಲ್, ತಾಪಂ ಇಒ ವೀರಣ್ಣ ಕೌಲಗಿ ಹಾಜರಿದ್ದರು
ಅಫಜಲಪುರದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್‌ ಸಂಜೀವಕುಮಾರ ದಾಸರ ಧ್ವಜಾರೋಹಣ ನೆರವೇರಿಸಿದರು. ಶಾಸಕ ಎಂ.ವೈ.ಪಾಟೀಲ್, ತಾಪಂ ಇಒ ವೀರಣ್ಣ ಕೌಲಗಿ ಹಾಜರಿದ್ದರು    

ಅಫಜಲಪುರ: ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ತಾಲ್ಲೂಕು ಪಂಚಾಯಿತಿಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುವಾರ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಇಲ್ಲಿನ ತಹಶಿಲ್ದಾರ್‌ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ತಹಶೀಲ್ದಾರ್‌ ಸಂಜುಕುಮಾರ್ ದಾಸರ್‌ ಧ್ವಜಾರೋಹಣ ನೆರವೇರಿಸಿದರು. ಎಸ್‌ಎಸ್ಎಲ್‌ಸಿ, ಪಿಯುಸಿ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಲ್ಯಾಪ್‌ಟಾಪ್‌ ವಿತರಿಸಲಾಯಿತು. 28 ಜನ ಮಾಜಿ ಯೋಧರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ನೀಡಿ ಶಾಸಕ ಎಂ.ವೈ.ಪಾಟೀಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖಕರ್‌ ಕರಜಿಗಿ, ಪ್ರಕಾಶ್ ಜಮಾದಾರ, ಮತಿನ್ ಪಟೇಲ್, ಸಿದ್ದಾರ್ಥ ಬಸರಿಗಿಡದ, ರಾಜು ಆರೇಕರ್, ಮಾರಾಯ ಅಗಸಿ, ಫಿರೋಜ್ ಜಾಗಿರ್ದಾರ್, ಎಸ್‌.ಎಸ್.ಪಾಟೀಲ್‌, ಶಿವಪುತ್ರಪ್ಪ ಸಂಗೋಳಗಿ, ಶ್ರೀಕಾಂತ್ ಚಿಂಚೋಳಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಎಂ.ಗುಣಾರಿ, ತಹಶೀಲ್ದಾರ್‌ ಸಂಜು ಕುಮಾರ್ ದಾಸರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೀರಣ್ಣ ಕೌಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಪಾಟೀಲ್, ಪುರಸಭೆ ಮುಖ್ಯ ಅಧಿಕಾರಿ ವಿಜಯ ಮಹಾಂತೇಶ ಹೂಗಾರ್, ಸಿಪಿಐ ಚೆನ್ನಯ್ಯ ಹಿರೇಮಠ್, ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗಿಮನಿ, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಕೆ.ಎಂ.ಕೋಟೆ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಿವಯೋಗಿ ಮತ್ತಿತರರು ಹಾಜರಿದ್ದರು.

ADVERTISEMENT

ಎಸ್‌ಎಂವಿವಿಎಸ್: ಇಲ್ಲಿನ ಮಹಾಂತೇಶ್ ವಿದ್ಯಾವರ್ಧಕ ಸಂಘದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಸಕ ಎಂ.ವೈ.ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮಂಜೂರ್ ಅಹ್ಮದ್ ಪಟೇಲ್, ಸದಾಶಿವ ಮೇತ್ರೆ, ಸಿದ್ದರಾಮಪ್ಪ ಮನ್ಮಿ, ರಾಜೇಶ್ ಸೂರ್ಯಕಾಂತ್ ನಾಕೇದಾರ, ಸಂಸ್ಥೆಯ ಆಡಳಿತ ಅಧಿಕಾರಿ ಮಲ್ಲಯ್ಯ ಕರಬಂಟನಾಳ, ಪ್ರಾಚಾರ್ಯ ಎಂ.ವೀರನಗೌಡ, ಎಂ.ಎಸ್.ಗಣಾಚಾರಿ, ಶಶಿಕಲಾ ಖಜೂರಿ, ಸಿದ್ದು ಎಲ್ಜಿ, ಮುಖ್ಯ ಶಿಕ್ಷಕ ಚಂದ್ರಕಾಂತ್ ಗುಂಡದ, ಗಂಗಾಧರ ಕಾಂಬಳೆ ಮತ್ತಿತರರು ಹಾಜರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಚಿದಾನಂದ ಹಿರೇಮಠ ಸೇರಿ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

ಪುರಸಭೆ ವರದಿ: ಪುರಸಭೆ ಕಾರ್ಯಾಲಯದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಯೋಜನಾಧಿಕಾರಿ ಗಾಯತ್ರಿ ದೇಗಲಮಡಿ ಹಾಗೂ ಮಲ್ಲಿನಾಥ ಪಾಟೀಲ್ ಮತ್ತಿತರರು ಹಾಜರಿದ್ದರು. ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಣ್ಣ ನೀರಾವರಿ ಕಚೇರಿಯಲ್ಲಿ ಶಾಂತಪ್ಪ ಜಾಧವ್, ಜಿ.ಪಂ. ಉಪವಿಭಾಗದಲ್ಲಿ ಬಾಬುರಾವ್ ಜ್ಯೋತಿ, ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಿಗಿಮನಿ, ಪಶು ಸಂಗೋಪನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಕೆ.ಎಂ.ಕೋಟೆ, ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಸಂಘದ ಉಪಾಧ್ಯಕ್ಷ ಪಂಚಪ್ಪ ದೇವಣಿ ಧ್ವಜಾರೋಹಣ ನೆರವೇರಿಸಿದರು.

ಆಯುರ್ವೇದಿಕ್ ಆಸ್ಪತ್ರೆ: ತಾಲ್ಲೂಕಿನ ಬಳ್ಳೂರಗಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಡಾ. ಶ್ರೀಶೈಲ್ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಗ್ರಾಮದ ಮುಖಂಡರಾದ ವಿಜಯಕುಮಾರ್ ಪಾಟೀಲ್, ನೆಹರು ಮಠಪತಿ, ಗಣಪತಿ ಪುಲಾರಿ, ಮಾರುತಿ ಜಂಗಾಡೆ, ಅಣ್ಣಪ್ಪ ಶೇಕ್, ಇಸ್ಮಾಯಿಲ್, ಪ್ರಭಾವತಿ ಮೇತ್ರೆ, ಪ್ರತಿಭಾ ಮಹಿಂದ್ರಾಕರ್, ಬಳೂರಗಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಭೀಮಾಶಂಕರ್ ಸಾಸೇಕರ್, ನಾರಾಯಣ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.