ADVERTISEMENT

ಪ್ರೊ.ಗಾದಗೆಗೆ ಐಎಸ್‌ಟಿಇ ಫೆಲೋಶಿಪ್ ಪ್ರಶಸ್ತಿ

ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿನ ಮೂರು ದಶಕಗಳ ಸೇವೆಗೆ‌ ಸಂದ ಗೌರವ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:14 IST
Last Updated 23 ಜೂನ್ 2024, 16:14 IST
ಭುವನೇಶ್ವರದಲ್ಲಿ ನಡೆದ ಐಎಸ್‌ಟಿಇ 53ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಅವರಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಐಎಸ್‌ಟಿಇ ಅಧ್ಯಕ್ಷ ಪ್ರೊ. ಪ್ರತಾಪಸಿಂಗ್ ಕಾಕಾಸಾಹೇಬ್ ದೇಸಾಯಿ, ಕೆಐಎಸ್ಎಸ್, ಕೆಐಐಟಿ ಡೀಮ್ಡ್ ಯೂನಿವರ್ಸಿಟಿ ಸಂಸ್ಥಾಪಕ ಪ್ರೊ.ಅಚ್ಯುತ್ ಸಮಂತ‌ ಇತರರಿದ್ದರು
ಭುವನೇಶ್ವರದಲ್ಲಿ ನಡೆದ ಐಎಸ್‌ಟಿಇ 53ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಅವರಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಐಎಸ್‌ಟಿಇ ಅಧ್ಯಕ್ಷ ಪ್ರೊ. ಪ್ರತಾಪಸಿಂಗ್ ಕಾಕಾಸಾಹೇಬ್ ದೇಸಾಯಿ, ಕೆಐಎಸ್ಎಸ್, ಕೆಐಐಟಿ ಡೀಮ್ಡ್ ಯೂನಿವರ್ಸಿಟಿ ಸಂಸ್ಥಾಪಕ ಪ್ರೊ.ಅಚ್ಯುತ್ ಸಮಂತ‌ ಇತರರಿದ್ದರು   

ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದಗೆ ಅವರು ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ (ಐಎಸ್‌ಟಿಇ) 2023ನೇ ಸಾಲಿನ ಗೌರವ ಫೆಲೋಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಒಡಿಶಾ ರಾಜಧಾನಿ ಭುವನೇಶ್ವರದಲ್ಲಿರುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಿಕಲ್ ಸಂಸ್ಥೆಯ (ಕೆಐಐಟಿ) ಸಭಾಂಗಣದಲ್ಲಿ ಭಾನುವಾರ ನಡೆದ ಐಎಸ್‌ಟಿಇ 53ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರೊ.ಬಸವರಾಜ ಗಾದಗೆ ಅವರಿಗೆ ಫೆಲೋಶಿಪ್ ಪ್ರಶಸ್ತಿ ಪ್ರದಾನ ‌ಮಾಡಲಾಯಿತು. ಪ್ರೊ.ಗಾದಗೆ ಕಲ್ಯಾಣ ಕರ್ನಾಟಕ ಭಾಗದಿಂದ ಈ ಗೌರವ ಪಡೆದ ಮೊದಲಿಗರು.

ಐಎಸ್‌ಟಿಇ ಅಧ್ಯಕ್ಷ ಪ್ರತಾಪಸಿಂಗ್ ಕಾಕಾಸಾಹೇಬ್ ದೇಸಾಯಿ, ಕೆಐಎಸ್ಎಸ್, ಕೆಐಐಟಿ ಡೀಮ್ಡ್ ಯೂನಿವರ್ಸಿಟಿ ಸಂಸ್ಥಾಪಕ ಪ್ರೊ. ಅಚ್ಯುತ್ ಸಮಂತ‌ ಅವರು ಪ್ರೊ.ಬಸವರಾಜ ಗಾದಗೆ ಅವರಿಗೆ ಫೆಲೋಶಿಪ್ ಪ್ರಶಸ್ತಿ ನೀಡಿ ಅಭಿನಂದಿಸಿದರು.

ADVERTISEMENT

ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರೊ.‌ಗಾದಗೆ ಅವರು ಕಳೆದ ಮೂರು ದಶಕಗಳಿಂದ ತಾಂತ್ರಿಕ ಶಿಕ್ಷಣ ಅಭಿವೃದ್ಧಿಗಾಗಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಐಎಸ್‌ಟಿಇ ಪ್ರತಿಷ್ಠಿತ ಫೆಲೋಶಿಪ್ ನೀಡಿ ಗೌರವಿಸಿದೆ. ಪ್ರೊ.ಬಸವರಾಜ ಗಾದಗೆ‌ ಮೂಲತಃ ಬೀದರ್ ನಗರದ ಜೆ.ಪಿ‌ ಕಾಲೊನಿ‌‌ ನಿವಾಸಿ.

ದೆಹಲಿ ಐಐಟಿ ನಿರ್ದೇಶಕ ಡಾ.ರಂಜನ್ ಬ್ಯಾನರ್ಜಿ, ನಿವೃತ್ತ ಮೇಜರ್ ಜನರಲ್ ಮಹೇಶಕುಮಾರ ಹಡಾ, ಎಐಸಿಟಿಇ ಸಲಹೆಗಾರ ಪ್ರೊ.ರಾಜೇಂದ್ರ ಕಾಕಡೆ, ಬಿಹಾರ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಅನಿಲಕುಮಾರ ಅವರಿಗೂ ಈ ಸಾಲಿನ ಗೌರವ ಫೆಲೋಶಿಪ್ ನೀಡಿ ಸತ್ಕರಿಸಲಾಯಿತು.

ಕೆಐಎಸ್ಎಸ್ ಡೀಮ್ಡ್ ಯೂನಿವರ್ಸಿಟಿ ಉಪ ಕುಲಪತಿ ಪ್ರೊ.ದೀಪಕಕುಮಾರ್ ಬೆಹೆರಾ, ಕೆಐಐಟಿ ಡೀಮ್ಡ್ ಯೂನಿವರ್ಸಿಟಿ ಉಪ ಕುಲಪತಿ ಪ್ರೊ.ಸುರಂಜೀತಸಿಂಗ್, ಐಎಸ್‌ಟಿಇ ಉಪಾಧ್ಯಕ್ಷರಾದ ಆರ್.ಭಾಸ್ಕರ್, ಗುಜ್ಜಾಲ ವೆಂಕಟಸುಬ್ಬಯ್ಯ, ಖಜಾಂಚಿ ಶರಣಪ್ಪ ಜಿ.ಮಲಶೆಟ್ಟಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಯದ್ ಮಾಜೀದ್ ಅಲಿ, ಪ್ರೊ.ಪ್ರಶಾಂತ ರೌತ್ರೆ, ಪ್ರೊ. ಜ್ಞಾನರಂಜನ್ ಮೊಹಾಂತಿ ಉಪಸ್ಥಿತರಿದ್ದರು.

ಐಎಸ್‌ಟಿಇ ಫೆಲೋಶಿಪ್ ಪ್ರಶಸ್ತಿ ಲಭಿಸಿರುವುದು ನನ್ನ ಜವಾಬ್ದಾರಿ ‌ಹೆಚ್ಚಿಸಿದ್ದು ಮತ್ತಷ್ಟು ಸೇವೆ ಮಾಡಲು ಪ್ರೇರಣೆ ತುಂಬಿದೆ. ಇನ್ನೂ ಹತ್ತು ವರ್ಷದೊಳಗೆ ನಮ್ಮ ಭಾಗ ಸಹ ಇತರೆ ಭಾಗದ ತಾಂತ್ರಿಕ ಶಿಕ್ಷಣದ ಸ್ಪರ್ಧೆಗೆ ಸಮನಾಗಿ ನಿಲ್ಲುತ್ತದೆ

- ಪ್ರೊ.ಬಸವರಾಜ ಗಾದಗೆ ವಿಟಿಯು ಕಲಬುರಗಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.