ADVERTISEMENT

ಡಾ.ಆಶಾದೇವಿಗೆ ದ್ರೋಣಾಚಾರ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:13 IST
Last Updated 8 ಫೆಬ್ರುವರಿ 2024, 13:13 IST
ಡಾ.ಆಶಾದೇವಿ
ಡಾ.ಆಶಾದೇವಿ   

ಕಲಬುರಗಿ: ನಗರದ ರಿಂಗ್‌ರೋಡ್‌ ಬಳಿಯ ಚಿಂದೆ ಲೇಔಟ್‌ನ ದೇವಿಕಾ ಮೆಟರ್ನಿಟಿ ಆಸ್ಪತ್ರೆ ಮುಖ್ಯಸ್ಥೆ ಡಾ.ಆಶಾದೇವಿಗೆ ಗಂಗಾಣೆ ಅವರಿಗೆ ಇಂಡಿಯನ್‌ ಸೊಸೈಟಿ ಫಾರ್‌ ಅಸಿಸ್ಟಡ್‌ ರೀಪ್ರೊಡಕ್ಷನ್‌ ವತಿಯಿಂದ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿದೆ.

ಮಹಿಳಾ ಆರೋಗ್ಯ ಮತ್ತು ಸಂತಾನೋತ್ಪತ್ತಿ ಕ್ಷೇತ್ರದಲ್ಲಿನ ಸೇವೆಗಾಗಿ ಅವರಿಗೆ ಈ ಪ್ರಶಸ್ತಿ ದೊರೆತಿದ್ದು, ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರೇ ಮಾಹಿತಿ ನೀಡಿದರು.

‘ಗುಟಕಾ ಮತ್ತು ತಂಬಾಕು ಸೇವನೆಯಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಫಲವಂತಿಕೆ ಕುಸಿಯುತ್ತಿದೆ’ ಎಂದ ಅವರು, ‘ದೀರ್ಘಕಾಲದಿಂದ ಮಕ್ಕಳಿಲ್ಲದವರು ಮಗು ಪಡೆಯಲು ಇಬ್ಬರೂ ತಪಾಸಣೆ ಮಾಡಿಸಿಕೊಳ್ಳಬೇಕು. ನಮ್ಮ ಆಸ್ಪತ್ರೆ ವತಿಯಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಔಷಧೀಯ ಖರ್ಚನ್ನು ಮಾತ್ರ ಅವರು ಭರಿಸಬೇಕು. ನಮ್ಮ ಆಸ್ಪತ್ರೆಯಲ್ಲಿ ಐವಿಎಫ್‌ ಸೇರಿದಂತೆ ಎಲ್ಲ ಸೌಲಭ್ಯಗಳು ಇವೆ. ಇದರ ಸದುಪಯೋಗವನ್ನು ಮಕ್ಕಳಿಲ್ಲ ಎಂದು ಕೊರಗುತ್ತಿರುವವರು ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.