ಕಲಬುರಗಿ: ತಾಲ್ಲೂಕಿನ ಪಟ್ಟಣ ಗ್ರಾಮದ ರೌಡಿಶೀಟರ್ ಸೋಮು ತಾಳಿಕೋಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬರ್ಬನ್ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಲಕ್ಷ್ಮಿಪುತ್ರ, ಅಣ್ಣಾರಾಯ, ಮಾಳಪ್ಪ, ಸಿದ್ದು ಸೇರಿ ಆರು ಜನರು ಬಂಧಿತರು.
ನ.12ರಂದು ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದ ಆರೋಪಿಗಳು ನಂತರ ಶವವನ್ನು ಬೈಕ್‌ನಲ್ಲಿ ಇಟ್ಟುಕೊಂಡು ಬಂದು ಆಳಂದ ರಸ್ತೆಯ ರೈಲ್ವೆ ಹಳಿಯ ಬಳಿ ಬಿಸಾಕಿ ರಸ್ತೆ ಮಾರ್ಗವಾಗಿ ನೆರೆಯ ಮಹಾರಾಷ್ಟ್ರದ ಸೋಲಾಪುರಕ್ಕೆ ಪರಾರಿಯಾಗಿದ್ದರು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೋಲಾಪುರ-ಅಫಜಲಪುರ ಮಾರ್ಗ ಮಧ್ಯೆ ಸಾರಿಗೆ ಬಸ್‌ನಲ್ಲಿ ಬಂಧಿಸಿದರು.
ಹಳೇ ವೈಷ್ಯಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಹಂತಕರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸೋಮು ದಾಬಾದಲ್ಲಿ ಗಲಾಟೆ ಮಾಡಿದ್ದ. ಮತ್ತೋರ್ವ ರೌಡಿ ಅವತಾರ್ ಸಿಂಗ್ ಜೊತೆ ಸೇರಿ ಪಟ್ಟಣ ಗ್ರಾಮದ ಬಳಿ ಇರುವ ಡ್ರೈವರ್ ದಾಬಾದವರ ಮೇಲೆ ಹಲ್ಲೆ ಮಾಡಿದ್ದ. ಇದಕ್ಕೆ ಪ್ರತಿಯಾತಿ ದಾಬಾ ಮಾಲೀಕನ ಸಹೋದರ ಲಕ್ಷ್ಮಿಪುತ್ರ ಮತ್ತು ತಂಡದವರು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.