ADVERTISEMENT

ಚಿಂಚೋಳಿ ಪುರಸಭೆ ಉಪ ಚುನಾವಣೆ: ವೆಂಕಟಮ್ಮ ಘಾಲಿ ಗೆಲುವು

ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪಕುಮಾರ ಘಾಲಿ ಅವತು ಜಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 6:47 IST
Last Updated 31 ಅಕ್ಟೋಬರ್ 2022, 6:47 IST
ಚಿಂಚೋಳಿಯ ವಾರ್ಡ್ 14ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪಕುಮಾರ ಘಾಲಿ ಜಯ ಗಳಿಸಿದ ಪ್ರಯುಕ್ತ ಸಂಭ್ರಮ ಆಚರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು
ಚಿಂಚೋಳಿಯ ವಾರ್ಡ್ 14ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪಕುಮಾರ ಘಾಲಿ ಜಯ ಗಳಿಸಿದ ಪ್ರಯುಕ್ತ ಸಂಭ್ರಮ ಆಚರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು   

ಚಿಂಚೋಳಿ(ಕಲಬುರಗಿ): ಇಲ್ಲಿನ ಪುರಸಭೆಯ 14ನೇ ವಾರ್ಡಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪಕುಮಾರ ಘಾಲಿ ಅವತು ಜಯ ಸಾಧಿಸಿದ್ದಾರೆ.

ತಾಲ್ಲೂಕು ಆಡಳಿತ ಸೌಧದಲ್ಲಿ‌ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪಕುಮಾರ ಘಾಲಿ 267, ಬಿಜೆಪಿ ಅಭ್ಯರ್ಥಿ ಸುಜಾತಾ ಕಾಶಿನಾಥ ನಾಟಿಕಾರ 179 ಮತ್ತು ಜೆಡಿಎಸ್ ಅಭ್ಯರ್ಥಿ ಮುಮ್ತಾಜ್ ಬೇಗಂ ಜಬ್ಬಾರಮಿಯಾ 26 ಹಾಗೂ ನೋಟಾಗೆ 4 ಮತಗಳು ಬಂದಿವೆ.

ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸುಜಾತಾ ಅವರಿಗಿಂತ 88 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ADVERTISEMENT

ಸದಸ್ಯೆ ವಿದ್ಯಾವತಿ ಘಾಲಿ ಅವರ ಅಕಾಲಿಕ‌ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.