ADVERTISEMENT

KKRDBಯಲ್ಲಿ ಶೇ 15ರಷ್ಟು ಕಮಿಷನ್: ಗುತ್ತಿಗೆದಾರರ ಸಂಘದ ಅಧ್ಯಕ್ಷರಿಂದ ಆರೋಪ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 6:01 IST
Last Updated 20 ನವೆಂಬರ್ 2024, 6:01 IST

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಶೇ 20ರಿಂದ 25ರಷ್ಟು ಕಾಮಗಾರಿಗಳನ್ನು ಲ್ಯಾಂಡ್‌ ಆರ್ಮಿಗೆ ನೀಡಲಾಗುತ್ತಿದೆ. ಕೆಲವು ಶಾಸಕರು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ (ಕೆಆರ್‌ಐಡಿಎಲ್‌) ಶೇ 10ರಿಂದ ಶೇ 15ರಷ್ಟು ಕಮಿಷನ್ ಪಡೆಯುತ್ತಿದ್ದಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಪ್ರಭಾರ ಅಧ್ಯಕ್ಷ ಜಗನ್ನಾಥ ಶೇಗಜಿ ಆರೋಪಿಸಿದರು.

‘ಕೆಆರ್‌ಐಡಿಎಲ್‌ಗೆ ಕಾಮಗಾರಿಗಳನ್ನು ನೀಡುವ ಮೂಲಕ ಕೆಕೆಆರ್‌ಡಿಬಿಯ ಕುತ್ತಿಗೆ ಹಿಸುಕುವ ಕೆಲಸವನ್ನು ಈ ಭಾಗದ ಕೆಲವು ಶಾಸಕರು ಮಾಡುತ್ತಿದ್ದಾರೆ. ಗುತ್ತಿಗೆದಾರರು ತೆರಿಗೆ, ರಾಯಲ್ಟಿ, ಮಾರಾಟ ತೆರಿಗೆ ಕಟ್ಟುತ್ತಿದ್ದು, ಏನೂ ಇಲ್ಲದ ಕೆಆರ್‌ಐಡಿಎಲ್‌ಗೆ ಏಕೆ ಕೊಡುತ್ತಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಮುತುವರ್ಜಿ ವಹಿಸಿ ಕೆಆರ್‌ಐಡಿಎಲ್‌ಗೆ ಗುತ್ತಿಗೆ ಕೊಡುತ್ತಿರುವುದರ ಹಿಂದೆ ಏನಾದರೂ ಇರಬಹುದು. ಕೆಕೆಆರ್‌ಡಿಬಿ ಅನುದಾನದಲ್ಲಿ ಕಮಿಷನ್‌ ಪಡೆಯುತ್ತಿರುವ ಬಗ್ಗೆ ಕೆಲವರು ಮೌಖಿಕವಾಗಿ ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ಕೊಟ್ಟರೆ ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ಅವರಿಗೆ ಹೇಳಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.