ಸುರಪುರ: ‘ಕಲ್ಯಾಣ ಕರ್ನಾಟಕ ಭಾಗ 12ನೇ ಶತಮಾನದಲ್ಲಿ ಬಸವಾದಿ ಶರಣರು, ನಂತರ ಬಂದ ಸೂಫಿ, ಸಂತರಿಂದ ಸಮೃದ್ಧವಾದ ನಾಡು. ಕೆಲವು ವರ್ಷ ನಿಜಾಮರ ಆಳ್ವಿಕೆಗೆ ಒಳಪಟ್ಟ ಮಾತ್ರಕ್ಕೆ ಹಿಂದುಳಿದ ಹಣೆಪಟ್ಟಿ ಹಚ್ಚುವುದು ಸರಿಯಲ್ಲ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಪ್ರತಿಪಾದಿಸಿದರು.
ಸಮೀಪದ ಹಸನಾಪುರದ ವೈ. ವರದರಾಜ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್‍ನ ತಕ್ಷಶಿಲಾ ಇಂಟರ್‍ನ್ಯಾಷನಲ್ ಶಾಲೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದುಳಿದ ಪ್ರದೇಶವೆಂಬ ಭಾವವನ್ನು ಮಕ್ಕಳಲ್ಲಿ ಅನಗತ್ಯವಾಗಿ ತುಂಬಲಾಗಿದೆ. ಇದೇ ಕಾರಣದಿಂದ ಈ ಭಾಗ ಹಿಂದುಳಿದಿದೆ. ಇಲ್ಲಿನ ಮಕ್ಕಳಲ್ಲಿ ಅಗಾಧವಾದ ಶಕ್ತಿ ಇದೆ. ಜ್ಞಾನ ಇದೆ. ಇದನ್ನು ಮನಗಂಡು ನಮ್ಮ ಸಂಸ್ಥೆಯ ಸಹಯೋಗದಲ್ಲಿ ಡಾ. ಯನಗುಂಟಿ ಪರಿವಾರದವರು ಶಾಲೆ ಆರಂಭಿಸಿದ್ದಾರೆ’ ಎಂದರು.
‘ಅಂತರಂಗ ಶುದ್ಧಿಗೆ ಶಿಕ್ಷಣ ಮುಖ್ಯ. ಸಂಸ್ಕಾರ, ಸಂಸ್ಕøತಿಯುಳ್ಳ ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಉದ್ದಾರ ಸಾಧ್ಯ. ಎಲ್ಲಿ ಶಿಕ್ಷಣ ಸರಿಯಾಗಿರುತ್ತದೆಯೋ ಅಲ್ಲಿನ ಸಮಾಜ ಸರಿಯಾಗಿರುತ್ತದೆ’ ಎಂದು ಆಭಿಪ್ರಾಯಪಟ್ಟರು.
‘ಮೌಲ್ಯ ಅನ್ನೊದು ಮಾತಿನಲ್ಲಿ ಇಲ್ಲ, ನಡೆಯಲ್ಲಿ ಇದೆ. ಮಕ್ಕಳು ನಾವು ಹೇಳುವುದನ್ನು ಕೇಳುಯವುದಿಲ್ಲ. ನಾವು ಮಾಡುವುದನ್ನು ಅನುಸರಿಸುತ್ತಾರೆ. ಕಾರಣ ಮಕ್ಕಳ ಮುಂದೆ ಪಾಲಕರು ಯಾವಾಗಲು ಸನ್ಮಾರ್ಗದಲ್ಲಿ ಇರಬೇಕು’ ಎಂದು ಸಲಹೆ ನೀಡಿದರು.
‘2900 ವರ್ಷಗಳ ಹಿಂದೆ ನಮ್ಮ ದೇಶದಲ್ಲಿದ್ದ ತಕ್ಷಶಿಲಾ ವಿಶ್ವವಿದ್ಯಾಲಯ ಮತ್ತು ವಿಶ್ವದ ಸ್ಥಾನದಲ್ಲಿತ್ತು. ಪ್ರಪಂಚದ ಬೇರೆ ಬೇರೆ ದೇಶಗಳ 10 ಸಾವಿರ ವಿದ್ಯಾರ್ಥಿಗಳು ಅಂದು ಅಭ್ಯಾಸ ಮಾಡುತ್ತಿದ್ದರಂತೆ. ತಕ್ಷಶಿಲಾ ವಿವಿಯ ಕೀರ್ತಿಯ ನೆನಪಾದರೂ ನಮ್ಮ ಜನರಿಗೆ ಇರಲಿ ಎಂಬ ಉದ್ದೇಶದಿಂದ ತಮ್ಮ ಶಾಲೆಗೆ ತಕ್ಷಶಿಲಾ ಹೆಸರಿಡಲಾಗಿದೆ’ ಎಂದು ಹೇಳಿದರು.
ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮತ್ತು ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಮಾತನಾಡಿದರು.
ಗೊಲಪಲ್ಲಿಯ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ, ದೇವರಗೋನಾಲದ ಹೈಯಾಳಲಿಂಗೇಶ್ವರ ದೇವಸ್ಥಾನದ ಸಕ್ರೆಪ್ಪÀ್ಪ ಪೂಜಾರಿ, ಮುಖ್ಯ ಶಿಕ್ಷಕ ರಾಕೇಶ ನಾಯರ್ ವೇದಿಕೆಯಲ್ಲಿದ್ದರು.
ಸಂಸ್ಥೆಯ ಅಧ್ಯಕ್ಷೆ ಅಂಬಿಕಾ ಯನಗುಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಮುಕುಂದ ಯನಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಲಾಯಿತು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.