ADVERTISEMENT

‘ಸಮಸ್ಯೆ ಪರಿಹಾರಕ್ಕೆ ಸಂಘಟನಾತ್ಮಕ ಹೋರಾಟ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:23 IST
Last Updated 8 ನವೆಂಬರ್ 2024, 16:23 IST
ಕಮಲಾಪುರ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ತಾಲ್ಲೂಕು ಘಟಕದ ಪಾದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಘಟಕದ ಅಧ್ಯಕ್ಷೆ ನಂದಿನಿ ಎಸ್‌. ಸನಬಾಳ್ ಉದ್ಘಾಟಿಸಿದರು
ಕಮಲಾಪುರ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ತಾಲ್ಲೂಕು ಘಟಕದ ಪಾದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಘಟಕದ ಅಧ್ಯಕ್ಷೆ ನಂದಿನಿ ಎಸ್‌. ಸನಬಾಳ್ ಉದ್ಘಾಟಿಸಿದರು   

ಕಮಲಾಪುರ: ‘ವೈಯಕ್ತಿಕ, ಸಾರ್ವಜನಿಕ, ಸಮಾಜಿಕ ಸೇರಿದಂತೆ ನಮ್ಮ ವೃತ್ತಿಯಲ್ಲಿನ ಬಹುತೇಕ ಸಮಸ್ಯೆಗಳ ಪರಿಹಾರಕ್ಕೆ ಸಂಘಟನಾತ್ಮಕ ಹೋರಾಟ ಅಗತ್ಯ’ ಎಂದು ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ನಂದಿನಿ ಎಸ್‌.ಸನಬಾಳ್ ತಿಳಿಸಿದರು.

ಪಟ್ಟಣದ ಅಜೀಂ ಪ್ರೇಮಜಿ ಪೌಂಡೇಶನನ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಮಲಾಪುರ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಹುದ್ದೆಯಲ್ಲಿರುವ ಕೆಲ ಮಹಿಳೆಯರು ಮೇಲಾಧಿಕಾರಿಗಳು, ಸಹೋದ್ಯೋಗಿಗಳು ಸಾರ್ವಜನಿಕರಿಂದ ಶೋಷಣೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ತನ್ನ ಸಮಸ್ಯೆ ಪುರುಷರ ಬಳಿ ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ. ಆ ಸಂಧರ್ಭದಲ್ಲಿ ಮಹಿಳೆಯರ ಸಂಘಟನೆ ಸೂಕ್ತ ಪರಿಹಾರ ಕಲ್ಪಿಸುತ್ತದೆ’ ಎಂದರು.

ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ ಮಾತನಾಡಿದರು. 

ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರಸಪ್ಪ ಟಿ. ರಂಗೋಲಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜಶೇಖರ ತಪಲಿ, ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ಖಜಾಂಚಿ ಕವಿತಾ ಮಾಶಾಳಕರ್, ಕಲಬುರಗಿ ತಾಲ್ಲೂಕು ಘಟಕದ ಅಧ್ಯಕ್ಷೆ ಸವಿತಾ ನಾಸಿ, ಕಮಲಾಪುರ ತಾಲ್ಲೂಕು ಘಟಕದ ಅಧ್ಯಕ್ಷೆ ರಾಚಮ್ಮ ಪಾಟೀಲ, ಉಪಾಧ್ಯಕ್ಷೆ ಮಹಾದೇವಿ ಪ್ರಸನ್‌, ಕಸ್ತೂರಿಬಾಯಿ ರಾಜೇಶ್ವರ, ಪ್ರಧಾನ ಕಾರ್ಯದರ್ಶಿ ರಾಜೇಶ್ಶ್ರೀ, ಖಜಾಂಚಿ ಮೀರಾ ರೆಡ್ಡಿ, ಸಹ ಕಾರ್ಯದರ್ಶಿಗಳಾದ ಮಹಾದೇವಿ ಬಿರಾದಾರ, ಶ್ರೀದೇವಿ ಸಿಂಪಿ, ಲಕ್ಷ್ಮೀ ಕುಂಬಾರ, ಸುನಿತಾ ರೆಡ್ಡಿ, ಸರಿತಾ ರಾಠೋಡ್, ಗೀತಾ ಪರಿಯಾನ, ಪಾರ್ವತಿ ರೆಡ್ಡಿ, ರೂಪಾ ಗೌರೆ, ಪ್ರೇಮಿಲಾ, ಪವಿತ್ರಾ, ಸವಿತಾ ಚೌವಾಣ್, ಭೀಮಶಂಕರ ರಾಜೇಶ್ವರ, ದೇವಿಂದ್ರಪ್ಪ ಗಣಮುಖಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.