ADVERTISEMENT

ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯ: ಚಂದು ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 5:57 IST
Last Updated 26 ಜುಲೈ 2024, 5:57 IST
ಕಲಬುರಗಿಯಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾ ನಗರ ಘಟಕದ ವತಿಯಿಂದ ಕಾರ್ಗಿಲ್ ವಿಜಯ ಯಾತ್ರೆಯ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು
ಕಲಬುರಗಿಯಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾ ನಗರ ಘಟಕದ ವತಿಯಿಂದ ಕಾರ್ಗಿಲ್ ವಿಜಯ ಯಾತ್ರೆಯ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು   

ಕಲಬುರಗಿ: ‘1999ರಲ್ಲಿನ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪ್ರಾಣವನ್ನು ಕಳೆದುಕೊಂಡ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ಹೇಳಿದರು.

ನಗರದ ಶಹಾಬಜಾರ್ ಬಡಾವಣೆಯಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾ ನಗರ ಘಟಕದ ವತಿಯಿಂದ ಕಾರ್ಗಿಲ್ ವಿಜಯ ಯಾತ್ರೆಯ ಅಂಗವಾಗಿ ಶಹಾ ಬಜಾರ್‌ನ ಮರಗಮ್ಮ ದೇವಸ್ಥಾನದಿಂದ ಶಹಾ ಬಜಾರ್ ನಾಕಾವರೆಗೆ ನಡೆದ ಪಂಜಿನ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

‘ಕಾರ್ಗಿಲ್‌ ಯುದ್ಧದಲ್ಲಿ ಪ್ರಾಣದ ಹಂಗು ತೊರೆದು ಉಗ್ರರನ್ನು ಸದೆಬಡೆದು ದೇಶಕ್ಕೆ ಜಯ ತಂದುಕೊಟ್ಟ ಐತಿಹಾಸಿಕ ದಿನವನ್ನು ನಾವೆಲ್ಲರೂ ಕಾರ್ಗಿಲ್ ವಿಜಯ ದಿನವಾಗಿ ಪ್ರತಿ ವರ್ಷ ಆಚರಿಸುತ್ತೇವೆ. 2024ರ ಜುಲೈ 26ರ ಕಾರ್ಗಿಲ್‌ ವಿಜಯೋತ್ಸವಕ್ಕೆ 25 ವರ್ಷಗಳು ತುಂಬಲಿವೆ. ಈ ಸಂದರ್ಭದಲ್ಲಿ ನಾವೆಲ್ಲರೂ ದೇಶದ ಯೋಧರನ್ನು ನೆನೆಯುವುದು ಅವಶ್ಯಕವಾಗಿದೆ’ ಎಂದು ಹೇಳಿದರು.

ADVERTISEMENT

ಪಂಜಿನ ಮೆರವಣಿಗೆಯಲ್ಲಿ ಪಾಲಿಕೆಯ ಉಪ ಮೇಯರ್ ಶಿವಾನಂದ ಪಿಸ್ತಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಮಹಾದೇವ ಬೆಳಮಗಿ, ಶಿವಯೋಗಿ ನಾಗೇನಹಳ್ಳಿ, ಮುಖಂಡರಾದ ಸಿದ್ದಾಜಿ ಪಾಟೀಲ, ಶ್ರೀನಿವಾಸ್ ದೇಸಾಯಿ, ಬಸವರಾಜ ಮುನ್ನೋಳ್ಳಿ, ಸಚಿನ ಕಡಗಂಚಿ, ಶಾಂತಕುಮಾರ್ ಸಂಕಾಲಿ, ಶಿವಾನಂದ ಬಂಡಕ್, ಮಹೇಶ್ ಪಟ್ಟಣ, ಮಲ್ಲಿಕಾರ್ಜುನ ಓಕಳಿ, ಈರಣ್ಣ ಗೊಳೆದ, ಮಹೇಶ್ ಚವ್ಹಾಣ್, ಶರಣು ಅವರಾದಿ, ಶಿವಕುಮಾರ್ ಹಂಗರಗಿ, ಸೂರ್ಯಕಾಂತ ಡೆಂಗಿ, ಶಾಂತಕುಮಾರ್ ಖೇಮಜಿ, ಗುರುರಾಜ್ ಚಿನ್ನಮಳ್ಳಿ, ಸುಂದರ್ ಕುಲಕರ್ಣಿ, ಸಂತು ಡೋಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.