ಕಲಬುರಗಿ: ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ 20 ಅಭ್ಯರ್ಥಿಗಳಿಂದ ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 4 ನಾಮಪತ್ರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಬಸವರಾಜ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ತೇಜಸ್‌ಕುಮಾರ್ ರಾಮಾಂಜನೇಯಲು ಎಂ., ಸುರೇಶ ರಾಜಶೇಖರಪ್ಪ ತಲಾ 2 ನಾಮಪತ್ರ ಸಲ್ಲಿಸಿದ್ದಾರೆ.
ಅದೇ ರೀತಿ ಸ್ವತಂತ್ರ ಅಭ್ಯರ್ಥಿಗಳಾಗಿ ಪ್ರಭು ನಾರಾಯಣ, ಬಸವರಾಜ ದುರ್ಗಪ್ಪ ಮ್ಯಾಗಲಮನಿ, ಮಹ್ಮದ್ ಹುಸೇನ್ ಮಹ್ಮದ್ ಅಲಿ, ಎನ್. ಪ್ರತಾಪ್ ರೆಡ್ಡಿ, ರಾಜು ದೇವಪ್ಪ, ರಿಯಾಜ್ ಅಹ್ಮದ್ ನಬಿಸಾಬ್, ಸತೀಶಕುಮಾರ ರಾಮಮೂರ್ತಿ, ಸಾಯಿನಾಥ ಸಂಜೀವಕುಮಾರ್ ನಾಗೇಶ್ವರ, ಸುನೀಲಕುಮಾರ, ಅನಿಮೇಶ ಮಹಾರುದ್ರಪ್ಪ, ವಿಲಾಸ್ ಮಾರುತಿ, ಶರಣಬಸಪ್ಪ ಶ್ರೀಮಂತಪ್ಪ, ಸುರೇಶ ದಾವೀದಪ್ಪ, ಸತೀಶಕುಮಾರ ಅಮೃತ ಹಾಗೂ ಶಿವಕುಮಾರ ಜಂಬುನಾಥ ಸ್ವಾಮಿ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ಈವರೆಗೆ 29 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿವೆ. 17ರಂದು ನಾಮಪತ್ರಗಳ ಪರಿಶೀಲನೆ, ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 3ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.