ADVERTISEMENT

ಲಿಂಗಾಯತ ಸಮಾಜಕ್ಕೆ ಅಪಮಾನ: ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 21 ಮೇ 2024, 5:59 IST
Last Updated 21 ಮೇ 2024, 5:59 IST
<div class="paragraphs"><p>ಡಾ. ಉಮೇಶ ಜಾಧವ</p></div>

ಡಾ. ಉಮೇಶ ಜಾಧವ

   

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶ್ರೀರಾಮ ಸೇನೆಯ ಸಿದ್ದಲಿಂಗ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಿ, ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಂಸದ ಡಾ. ಉಮೇಶ ಜಾಧವ ಆರೋಪಿಸಿದ್ದಾರೆ.

‘ಡಾಲರ್ಸ್ ಕಾಲೊನಿ ಸಚಿವರು ಮಾಧ್ಯಮಗಳ ಮುಂದೆ ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡುವ ಬದಲು ಅಧಿಕಾರದ ಮದ ಹಾಗೂ ಧಮ್ಕಿ ಹಾಕುವ ದಾಟಿಯಲ್ಲಿ ಮಾತನಾಡಿದ್ದಾರೆ. ಸ್ವಾಮೀಜಿ ಬಗ್ಗೆ ಸಚಿವರ ಪದ ಬಳಕೆ ಖಂಡನೀಯ. ಸ್ವಾಮೀಜಿಯನ್ನು ರೌಡಿ, ಅವನು, ಇವನು ಎಂದು ಏಕವಚನದಲ್ಲಿ ನಿಂದಿಸಿದ ಪರಿ ನೋಡಿದರೆ ಸ್ವಾಮೀಜಿ ಬಗ್ಗೆ ಎಷ್ಟು ಭಯವಿದೆ ಎಂಬುವುದು ಸ್ಪಷ್ಟವಾಗುತ್ತದೆ. ವೈಯಕ್ತಿಕವಾಗಿ ನಿಂದಿಸಿ, ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಪ್ರಕಟಣೆಯಲ್ಲಿ ಆಪಾದಿಸಿದ್ದಾರೆ.

ADVERTISEMENT

‘ಸಂಸದನಾಗಿ ಹೇಗೆ ವರ್ತಿಸಬೇಕು ಎಂಬುದು ನಿಮ್ಮಿಂದ ಕಲಿಯಬೇಕಾಗಿಲ್ಲ. ಸಿದ್ದಲಿಂಗ ಸ್ವಾಮೀಜಿ ಸಾಮಾಜಿಕ ಕಾರ್ಯಕರ್ತ ಹಾಗೂ ವೀರಶೈವ ಲಿಂಗಾಯತ ಧರ್ಮದ ಗುರುಗಳು. ಹೀಗಾಗಿ, ಅವರಿಗೆ ಗೌರವ ಕೊಡುವುದರಲ್ಲಿ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

‘ಮೂವರು ಯುವಕರನ್ನು ವಿವಸ್ತ್ರಗೊಳಿಸಿ, ದೌರ್ಜನ್ಯ ಎಸಗಿದ್ದನ್ನು ಸಚಿವರು ಸಣ್ಣ ಘಟನೆ ಎನ್ನುತ್ತಾರೆ. ಇದೆಯಾ ನೀವು ಜನಸಾಮಾನ್ಯರ ಜೀವಕ್ಕೆ ಕೊಡುವ ಬೆಲೆ? ಪ್ರಕರಣ ದಾಖಲಾದರೂ ಸಾರ್ವಜನಿಕವಾಗಿ ಬಹಿರಂಗ ಪಡೆಸದೆ ರಹಸ್ಯವಾಗಿ ಇರಿಸಿದ್ದು ಯಾರು? ಪೊಲೀಸರು ನಿಮ್ಮ ಕೈಗೊಂಬೆಯಂತೆ ವರ್ತಿಸುತ್ತಿದ್ದಾರಾ? ಪೋಲಿಸ್ ಇಲಾಖೆ ಮೇಲೆ ಒತ್ತಡ ಹೇರಿದ್ದು ಯಾರು ಎಂಬುದನ್ನು ಬಹಿರಂಗಪಡಿಸಿ’ ಎಂದು ಸವಾಲು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.