ADVERTISEMENT

ಕಲಬುರಗಿ | ಕಾರ್ತಿಕ ದೀಪೋತ್ಸವ ನ.2ರಿಂದ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 16:21 IST
Last Updated 30 ಅಕ್ಟೋಬರ್ 2024, 16:21 IST

ಕಲಬುರಗಿ: ನಗರದ ನ್ಯೂ ರಾಘವೇಂದ್ರ ಕಾಲೊನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನ.2ರಿಂದ ನ.7ರ ತನಕ ಜರುಲಿದೆ.

ನಿತ್ಯ ಸಂಜೆ 7 ಗಂಟೆಗೆ ಪಂಡಿತರಿಂದ ವೇದ–ಮಂತ್ರ–ಘೋಷಗಳೊಂದಿಗೆ ದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು. ಪ್ರತಿನಿತ್ಯ ಸುಪ್ರಭಾತ, ಸುಮಂಗಲೆಯರಿಂದ ಹರಿನಾಮಗಳು, ಬೆಳಿಗ್ಗೆ 6 ಗಂಟೆಗೆ ಅಣ್ಣಾಚಾರ್ ಕೊಂಚುರ್ ಅವರಿಂದ ಕಾರ್ತಿಕ ಮಾಸದ ಮಹಾತ್ಮೆ ಪ್ರವಚನ, ತದನಂತರ ಸೌಂದರ್ಯ ಲಹರಿ ಪಾರಾಯಣ ಜರುಗಲಿದೆ.

ಕಾರ್ತಿಕ ಮಾಸದ ಅಂಗವಾಗಿ ಪದ್ಮಶ್ರೀ ಭಜನಾ ಮಂಡಳಿಯಿಂದ ಲಕ್ಷ ಗೆಜ್ಜೆ ವಸ್ತ್ರವನ್ನು ಭಗವಂತನಿಗೆ ಸಮರ್ಪಿಸುವ ಸಂಕಲ್ಪ ಕೈಗೊಂಡಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಅಧ್ಯಕ್ಷ ನಾರಾಯಣರಾವ್ ಕುಲಕರ್ಣಿ ಪ್ರಕಟಣೆ ಮೂಲಕ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.