ಕಲಬುರಗಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ನ.17ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಬೇಕಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ (ಕೆ.ಡಿ.ಪಿ.) ಸಭೆಯನ್ನು ಕಾರಣಾಂತರಗಳಿಂದ ರದ್ದುಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದಾರೆ.
ಗ್ರಾಹಕರ ಸಂಪರ್ಕ ಸಭೆ ನಾಳೆ
ಕಲಬುರಗಿ: ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಲಬುರಗಿಯ ಎಲ್ಲಾ ನಗರ ಉಪವಿಭಾಗಗಳ ವ್ಯಾಪ್ತಿಗೆ ಬರುವ ಗ್ರಾಹಕರ ಸಂಪರ್ಕ ಸಭೆಯನ್ನು ನ.18ರಂದು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ–1ಕ್ಕೆ ಸಂಬಂಧಿಸಿದಂತೆ ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಕಲಬುರಗಿ ಸೂಪರ್ ಮಾರ್ಕೆಟ್‌ನ ಜೆಸ್ಕಾಂ ನಗರ ಉಪವಿಭಾಗ–1ರ ಕಾರ್ಯ ಮತ್ತು ಪಾಲನೆಯ ಎಇಇ ಕಚೇರಿಯಲ್ಲಿ ಹಾಗೂ ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ–2ಕ್ಕೆ ಸಂಬಂಧಿಸಿದಂತೆ ಅಂದು ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ–2ರ ಕಾರ್ಯ ಮತ್ತು ಪಾಲನೆಯ ಎಇಇ ಕಚೇರಿಯಲ್ಲಿ ಜರುಗಲಿದೆ.
ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ–3ಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪವಿಭಾಗ–3ರ ಎಇಇ ಕಚೇರಿಯಲ್ಲಿ ಹಾಗೂ ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ–4ಕ್ಕೆ ಸಂಬಂಧಿಸಿದಂತೆ ಅಂದು ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪವಿಭಾಗ–4ರ ಎಇಇ ಕಚೇರಿಯಲ್ಲಿ ಜರುಗಲಿದೆ. ಜೆಸ್ಕಾಂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ವಿದ್ಯುತ್‌ಗೆ ಸಂಬಂಧಿಸಿದ ಕುಂದುಕೊರತೆ ಹಾಗೂ ತಮ್ಮ ಸಮಸ್ಯೆಗಳನ್ನು ಸಲ್ಲಿಸಬಹುದಾಗಿದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.