ADVERTISEMENT

‘ನಂದಿನಿ ಸಿಹಿ ಉತ್ಸವ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 14:20 IST
Last Updated 21 ಡಿಸೆಂಬರ್ 2018, 14:20 IST
ನಂದಿನಿ ಸಿಹಿ ಉತ್ಸವಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ. ಚಾಲನೆ ನೀಡಿದರು
ನಂದಿನಿ ಸಿಹಿ ಉತ್ಸವಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ. ಚಾಲನೆ ನೀಡಿದರು   

ಕಲಬುರ್ಗಿ: ಕಲಬುರ್ಗಿ, ಬೀದರ್‌ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ‘ನಂದಿನಿ ಸಿಹಿ ಉತ್ಸವ’ ಆಯೋಜಿಸಲಾಗಿದೆ.

ಇಲ್ಲಿಯ ಕೇಂದ್ರ ಬಸ್‌ ನಿಲ್ದಾಣ ಎದುರು ಇರುವ ನಂದಿನಿ ಗ್ಯಾಲಕ್ಸಿ ಮಳಿಗೆಯಲ್ಲಿ ಈ ಉತ್ಸವಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ.ಅವರು ಶುಕ್ರವಾರ ಚಾಲನೆ ನೀಡಿದರು.

ಕೆಎಂಎಫ್‌ನಿಂದ ನಂದಿನಿ ಸಿಹಿ ಉತ್ಪನ್ನಗಳ ಗರಿಷ್ಠ ದರದ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಿದ್ದು, ಗ್ರಾಹಕರು ಪ್ರಯೋಜನ ಪಡೆಯಬೇಕು ಎಂದರು.

ADVERTISEMENT

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಎಚ್‌. ಕಮಕೇರಿ ಮಾತನಾಡಿ, ಜನವರಿ 9ರ ವರೆಗೆ ಸಿಹಿ ಉತ್ಸವ ನಡೆಯಲಿದೆ. ಒಕ್ಕೂಟದ ವ್ಯಾಪ್ತಿಯ ಕಲಬುರ್ಗಿ, ಬೀದರ್‌ ಮತ್ತು ಯಾದರಿಗಿ ಜಿಲ್ಲೆಗಳ ಏಜೆಂಟರು, ನಂದಿನಿ ಕ್ಷೀರ ಮಳಿಗೆಗಳಲ್ಲಿ ನಂದಿನಿಯ ಎಲ್ಲ ಸಹಿ ಉತ್ಪನ್ನ ಲಭ್ಯ. ಗ್ರಾಹಕರು ಹೆಚ್ಚಾಗಿ ಈ ಉತ್ಪನ್ನಗಳನ್ನು ಖರೀದಿಸಿ ಹೈನೋದ್ಯಮಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.

ಜಂಟಿ ನಿರ್ದೇಶಕ ತಥಾಗತ ವಿ., ಉಪ ವ್ಯವಸ್ಥಾಪಕ ಡಾ.ಮನೋಹರರಾವ ಕುಲಕರ್ಣಿ, ಕೆಎಂಎಫ್ ಕಲಬುರ್ಗಿ ಡಿಪೋ ಮೇಲ್ವಿಚಾರಕ ಸಿದ್ದಲಿಂಗ, ನಂದಿನಿ ಗ್ಯಾಲಕ್ಸಿಯ ವಿತರಕ ವಿದ್ಯಾಧರ ಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.

ಒಕ್ಕೂಟದ ವ್ಯವಸ್ಥಾಪಕ ಡಾ. ಸುನೀಲ್‌ ಎಸ್‌. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ವ್ಯವಸ್ಥಾಪಕ ವಿಜಯೇಂದ್ರ ದೇಶಪಾಂಡೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.