ADVERTISEMENT

ಸೇಡಂ: 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಲಿಂಗಾರೆಡ್ಡಿ ಶೇರಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:53 IST
Last Updated 13 ನವೆಂಬರ್ 2024, 14:53 IST
ಲಿಂಗಾರೆಡ್ಡಿ ಶೇರಿ
ಲಿಂಗಾರೆಡ್ಡಿ ಶೇರಿ   

ಸೇಡಂ: 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲಿಂಗಾರೆಡ್ಡಿ ಶೇರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ ಲಕ್ಷ್ಮೀನಾರಾಯಣ ಚಿಮ್ಮನಚೋಡ್ಕರ ತಿಳಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 02 ರಂದು ಸೇಡಂನಲ್ಲಿ ಸಮ್ಮೇಳನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಸೇಡಂ ತಾಲ್ಲೂಕಿನ ಜಾಕನಪಲ್ಲಿ ಗ್ರಾಮದ ಸಾಹಿತಿ ಲಿಂಗಾರೆಡ್ಡಿ ಶೇರಿ ಅವರು ಸರ್ಕಾರಿ ನೌಕರಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆಂಪು ಚಿತ್ತಾರ, ಬೇಸೂರಿನ ಹಾಡು, ಕನಸು ಕೆಡಿಸಿದ ಕೋಳಿ, ಒಲವಿನ ಹಾಡು (ಕವನ ಸಂಕಲನ), ವಿಶ್ವಬಂಧು ಮರುಳಸಿದ್ದ ಕಾವ್ಯದರ್ಪಣ, ಅಂತರಂಗ, ಓದಿನ ಬೊಗಸೆ, ಹರಿದ ಸೆರುಗು(ಗದ್ಯ ಕೃತಿಗಳು), ನಿತ್ಯಾನಂದ ತತ್ವ ಪದಗಳು, ಬಯಲ ದನಿಗಳು, ಸದ್ಯರ್ಮ, ಆಸರೆಯಾದವರು, ನಿಂಬೋಳಿ ತಿಪ್ಪಣ್ಣನವರ ನಿತ್ಯಾನಂದ ತತ್ವಪದಗಳು, ವಚನ ಸೂಕ್ತಿ, ಮಾತು ಮುತ್ತಿನ ಹಾರ(ಸಂಪಾದಿತ ಕೃತಿಗಳು), ಗುಡ್ಡದ ಮೈಲಾರಲಿಂಗನ ವಚನಗಳು(ವಚನ ಸಾಹಿತ್ಯ), ಪುಟ್ಟ ಪುಟ್ಟಿ (ಮಕ್ಕಳ ಸಾಹಿತ್ಯ) ಸಾಹಿತ್ಯದ ಮೂಲಕ ಅಕ್ಷರ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸೇವೆ ನಾಡು ನುಡಿಗೆ ಸೇವೆ ಸಲ್ಲಿಸಿದ್ದಾರೆ.

ADVERTISEMENT

ಅಲ್ಲದೆ ಸೇಡಂನ ಅಮ್ಮ ಗೌರವ ಪ್ರಶಸ್ತಿ, ಪುಟ್ಡ ರತ್ನ ಪ್ರಶಸ್ತಿ, ಸಾಹಿತ್ಯ ಸಾರಥಿ ಪ್ರಶಸ್ತಿ, ಸಂಕ್ರಮಣ ಕಾವ್ಯ ಪುರಸ್ಕಾರ, ಬಸವ ಪುರಸ್ಕಾರ, ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ ಸಂದಿವೆ. ಅಲ್ಲದೆ ಮುಧೋಳ ಗಡಿನಾಡ ಸಾಹಿತ್ಯ ಸಮ್ಮೇಳನದ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.