ADVERTISEMENT

ಲೋಕಾಯುಕ್ತ ಬಲೆಗೆ ಪುರಸಭೆ ಎಸ್‌ಡಿಎ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:02 IST
Last Updated 3 ಜುಲೈ 2024, 16:02 IST

ಕಲಬುರಗಿ: ಕೊಳವೆ ನೀರು ಸರಬರಾಜಿನ ಮನೆಯ ನಲ್ಲಿಗೆ ಟ್ಯಾಪ್‌ ಸಂಪರ್ಕಕೊಡಲು ₹10 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಜೇವರ್ಗಿ ಪುರಸಭೆಯ ದ್ವಿತೀಯ ದರ್ಜೆ ಸಹಾಯಕಿಯನ್ನು (ಎಸ್‌ಡಿಎ) ಲೋಕಾಯುಕ್ತ ಪೊಲೀಸರು ಬುಧವಾರ ವಶಕ್ಕೆ ಪಡೆದರು.

ಪುರಸಭೆಯ ಎಸ್‌ಡಿಎ ಶಾಹೀನಾ ಲಂಚ ಪಡೆದ ಆರೋಪಿ. ಪಟ್ಟಣದ ನಿವಾಸಿ ಅಬ್ದುಲ್ ರೆಹಮಾನ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಅಬ್ದುಲ್ ಅವರ ಮನೆಯ ನಲ್ಲಿಗೆ ಟ್ಯಾಪ್ ಸಂಪರ್ಕ ಕೊಡಲು ಸಾಕಷ್ಟು ಬಾರಿ ಅಲೆದಾಡಿಸಿದರು. ₹10 ಸಾವಿರ ಲಂಚ ಕೊಟ್ಟರೆ ಟ್ಯಾಪ್‌ ಸಂಪರ್ಕ ಮಾಡಿಸಿಕೊಡುವುದಾಗಿ ಬೇಡಿಕೆ ಇಟ್ಟಿದ್ದರು. ಬುಧವಾರ ಪುರಸಭೆ ಕಚೇರಿಯಲ್ಲಿ ₹10 ಸಾವಿರ ಲಂಚದ ಹಣ ಪಡೆಯುವ ವೇಳೆ ಶಹೀನಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಾಳ, ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ, ಸಿಬ್ಬಂದಿ ದಾಳಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.