ಸೇಡಂ: ‘ಡಿಸಿಸಿ ಬ್ಯಾಂಕ್ ಬಗ್ಗೆ ಈ ಭಾಗದ ರೈತರಿಗೆ ಮಾಹಿತಿಯೇ ಇರಲಿಲ್ಲ. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ನಂತರ ಸಾವಿರ ಕೋಟಿಗೂ ಅಧಿಕ ಬಡ್ಡಿರಹಿತ ಸಾಲ ವಿತರಿಸಲಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.
ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಶನಿವಾರ ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ಧ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಶ್ರೀಮಂತರಿಂದ ಸಾಲ ಪಡೆದು, ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರು. ಆದರೆ ಈಗ ಅವರು ಯಾವುದೇ ಕಾರಣಕ್ಕೂ ಬಡ್ಡಿ ಕಟ್ಟುವ ಹಾಗಿಲ್ಲ. ಒಂದು ವರ್ಷದವರೆಗೆ ಸಾಲ ಸದ್ಬಳಕೆ ಮಾಡಿಕೊಂಡು, ಮರುಪಾವತಿಸಿದ್ದಲ್ಲಿ ಇನ್ನು ಹೆಚ್ಚು ಸೌಲಭ್ಯ ಕೊಡುವುದಾಗಿ ಹೇಳಿದರು.
ಮುಧೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 524 ರೈತರಿಗೆ ಸುಮಾರು ₹3.95 ಕೋಟಿ ಬಡ್ಡಿರಹಿತ ಸಾಲ ವಿತರಣೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚು ಸಾಲ ನೀಡಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಣಿಕಮ್ಮ ಕಲಾ, ಬಿ.ಜಿ ಕಲ್ಲೂರ, ಡಾ.ಸುರೇಶ ಮೇಕಿನ್, ಶ್ರೀಕಾಂತರೆಡ್ಡಿ ಪಾಟೀಲ್, ಪರ್ವತರೆಡ್ಡಿ ಪಾಟೀಲ್, ನಾಗರೆಡ್ಡಿ ಪಾಟೀಲ್, ವಿಜಯಕುಮಾರ ಶರ್ಮಾ, ವಿಜಯಕುಮಾರ ಆಡಕಿ, ನಾಗರೆಡ್ಡಿ ದೇಶಮುಖ, ಶಿವಲಿಂಗರೆಡ್ಡಿ ಪಾಟೀಲ್, ಧರ್ಮಣ್ಣಾ ಇಟಗಾ, ನಾಗೇಂದ್ರಪ್ಪ ಸಾಹುಕಾರ, ಭೀಮರೆಡ್ಡಿ ಜಿಲ್ಲೆಡಪಲ್ಲಿ, ಭೀಮರಾಯ ಹಣಮನಹಳ್ಳಿ, ರಾಘವೇಂದ್ರ ಕುಸಮಾ, ವೆಂಕಟರಾವ ಮಿಸ್ಕಿನ್, ದತ್ತಾತ್ರೆಯ್ಯ, ಮಲ್ಕಪ್ಪ ಕೊಡದೂರ, ಮುಕುಂದ ದೇಶಪಾಂಡೆ, ಓಂಪ್ರಕಾಶ ಪಾಟೀಲ್, ಲಕ್ಷ್ಮಿಕಾಂತ ಹೊನ್ನಕೇರಿ, ವಿಜಯಕುಮಾರ ಖೇವಜಿ, ವಿಜಯಕುಮಾರರೆಡ್ಡಿ ಮಳಖೇಡ, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.