ಕಲಬುರಗಿ: ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಈಚೆಗೆ ಚಾಮನೂರಿನಲ್ಲಿ ನಡೆದ ಹಲ್ಲೆ ಘಟನೆಯಲ್ಲಿ ಗಾಯಗೊಂಡಿದ್ದ ಚಿತ್ತಾಪುರ ತಾಲ್ಲೂಕಿನ ಚಾಮನೂರು ಗ್ರಾಮದ ದಶರಥ ಪೂಜಾರಿ (65) ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆ: ಚಾಮನೂರು ಗ್ರಾಮದ ಕುರುಬ ಸಮಾಜಕ್ಕೆ ಸೇರಿದ ಸೂರ್ಯಕಾಂತ ಪೂಜಾರಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂಗೀತಾ ಮಾಲಗತ್ತಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಗೆ ಒಂದು ವರ್ಷದ ಗಂಡು ಮಗು ಇದೆ. ಮಗುವಿನ ನಾಮಕರಣಕ್ಕೆ ಗ್ರಾಮಕ್ಕೆ ಬಂದಿದ್ದಾಗ ಮಹಿಳೆಯ ಪೋಷಕರು ಹಲ್ಲೆ ನಡೆಸಿದ್ದರು. ಅಂತರ್ಜಾತಿ ವಿವಾಹದ ದ್ವೇಷದಿಂದಾಗಿ ಹಲ್ಲೆ ಮಾಡಲಾಗಿತ್ತು. ಘಟನೆಯಲ್ಲಿ ಯುವಕ ಸೂರ್ಯಕಾಂತ ತಂದೆ ದಶರಥ ಪೂಜಾರಿ, ಸಹೋದರ ತಿಪ್ಪಣ್ಣ ಪೂಜಾರಿ ಹಾಗೂ ಸಂಗೀತಾ ಮೇಲೆ ಹಲ್ಲೆ ನಡೆಸಲಾಗಿತ್ತು.
ದಶರಥ ಪೂಜಾರಿ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿತ್ತು. ಮಹಿಳೆಯ ಪೋಷಕರಾದ ದ್ಯಾವಪ್ಪ ಮಾಲಗತ್ತಿ, ಲಕ್ಷ್ಮಿ ದ್ವಾವಪ್ಪ, ಈಶ್ವರಾಜ ಹಾಗೂ ಯಂಕಪ್ಪ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.