ಕಲಬುರಗಿ: ಜ್ಯುವೆಲ್ಲರಿ ರಿಟೇಲರ್ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಕಲಬುರಗಿಯಲ್ಲಿ ನವೀಕೃತ ಮಳಿಗೆಯನ್ನು ಗುರುವಾರ ಆರಂಭಿಸಿದೆ.
ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀನಿಧಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಕಾಲೇಜು ಹುಡುಗರು ಬಹುತೇಕ ಮಳಿಗೆ ಸುತ್ತಲೇ ಬೀಡುಬಿಟ್ಟಿದ್ದರು. ಕಲಬುರಗಿಗೆ ಮೊದಲ ಬಾರಿ ಬಂದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ನವೀಕೃತ ಮಳಿಗೆ ಪುನಾರಂಭದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್, ‘ಗ್ರಾಹಕರಿಗೆ ಉತ್ತಮವಾದದ್ದನ್ನು ಒದಗಿಸುವ ಮೂಲಕ ನಮ್ಮ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತೇವೆ. ಹಿಂದಿನ ಮಳಿಗೆಗಿಂತಲೂ ನವೀಕೃತ ಮಳಿಗೆ ವಿಶಾಲವಾಗಿದೆ’ ಎಂದರು.
ಈ ವೇಳೆ ಮಲಬಾರ್ ಕರ್ನಾಟಕ ವಲಯದ ಮುಖ್ಯಸ್ಥ ಫಿಲ್ಸರ್ ಬಾಬು ಹಾಗೂ ಇತರೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.