ADVERTISEMENT

ಇಎಸ್‌ಐನಲ್ಲಿ ದಂತ ಪದವಿ ಪ್ರವೇಶ ಆರಂಭಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 10:27 IST
Last Updated 24 ಸೆಪ್ಟೆಂಬರ್ 2020, 10:27 IST
ಕಲಬುರ್ಗಿಯ ಇಎಸ್ಐ ಕ್ಯಾಂಪಸ್‌ನಲ್ಲಿ ಪ್ರಸಕ್ತ ವರ್ಷದ ಬಿಡಿಎಸ್‌ ಪ್ರವೇಶ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಭಗವಂತ ಖೂಬಾ ಅವರು ಕೇಂದ್ರ ಸಚಿವ ಡಾ.ಹರ್ಷವರ್ಧನ ಅವರಿಗೆ ಗುರುವಾರ ಮನವಿ ಸಲ್ಲಿಸಿದರು
ಕಲಬುರ್ಗಿಯ ಇಎಸ್ಐ ಕ್ಯಾಂಪಸ್‌ನಲ್ಲಿ ಪ್ರಸಕ್ತ ವರ್ಷದ ಬಿಡಿಎಸ್‌ ಪ್ರವೇಶ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಭಗವಂತ ಖೂಬಾ ಅವರು ಕೇಂದ್ರ ಸಚಿವ ಡಾ.ಹರ್ಷವರ್ಧನ ಅವರಿಗೆ ಗುರುವಾರ ಮನವಿ ಸಲ್ಲಿಸಿದರು   

ಕಲಬುರ್ಗಿ: ‘ಇಲ್ಲಿನ ನಿಎಸ್‌ಐಸಿ ಕ್ಯಾಂಪಸ್‌ನಲ್ಲಿ ಪ್ರಸಕ್ತ ವರ್ಷದದಂತ ಶಸ್ತ್ರಚಿಕಿತ್ಸಾ ಪದವಿ (ಬಿಡಿಎಸ್‌) ಪ್ರವೇಶ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬೀದರ್ ಸಂಸದ ಭಗವಂತ ಖೂಬಾ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ ಅವರಿಗೆ ಮನವಿ ಮಾಡಿದ್ದಾರೆ.

ನಹದೆಹಲಿಯಲ್ಲಿ ಗುರುವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತನಾಡಿದ ಸಂಸದರು, ಕಲಬುರ್ಗಿಯ ಇಎಸ್‌ಐ ಆಸ್ಪತ್ರೆ ಹೊಂದಿರುವ ಸೌಕರ್ಯ, ಸ್ಥಳಾವಕಾಶ ಹಾಗೂ ಬಿಡಿಎಸ್‌ ಪದವಿ ಪ್ರವೇಶದ ಅವಶ್ಯಕತೆಯ ಕುರಿತು ಮನವರಿಕೆ ಮಾಡಿದರು.

‘ಸದ್ಯ ಈ ಕ್ಯಾಂಪಸ್‌ನಲ್ಲಿ ಮೆಡಿಕಲ್‌ ಕಾಲೇಜು, ಡೆಂಟಲ್‌ ಕಾಲೇಜು, ಡೆಂಟಲ್‌ ನರ್ಸಿಂಗ್‌ ಹಾಗೂ ಪ್ಯಾರಾ ಮೆಡಿಕಲ್‌ ಕಾಲೇಜುಗಳು ಇವೆ. ಇಎಸ್‌ಐ ಕಾರ್ಪೊರೇಷನ್‌ ಅಡಿಯಲ್ಲಿ ಸ್ಥಾಪಿತವಾದ ರಾಜ್ಯದ ಏಕಮಾತ್ರ ಡೆಂಟಲ್‌ ಕಾಲೇಜು ಇದಾಗಿದೆ. ಇಎಸ್‌ಐ ವಿಮೆ ಹೊಂದಿದ ವ್ಯಕ್ತಿಗಳಿಗೆ, ಬಡ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ. ಆದರೆ, ಕೋವಿಡ್‌ ಉಪಟಳದ ಹಿನ್ನೆಲೆಯಲ್ಲಿ ‌ಈ ಕಾಲೇಜು ಆಡಳಿತ ಮಂಡಳಿಗೆ ಡಿಸಿಐ ವಿಧಿಸುವ ಕೆಲವು ಶರತ್ತುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದರಿಂದ ಪ್ರಸಕ್ತ (2020–21) ವರ್ಷದ ಬಿಡಿಎಸ್‌ ಪದವಿ ಪ್ರವೇಶ ಪ್ರಕ್ರಿಯೆಗೆ ಅಡಚಣೆ ಆಗಿದೆ. ಈ ಬಗ್ಗೆ ಸಚಿವರು ಗಮನಹರಿಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಶೀಘ್ರವೇ ಪ್ರವೇಶ ಮರು ಆರಂಭಕ್ಕೆ ಅನುವು ಮಾಡಿಕೊಡಬೇಕು’ ಎಂದೂ ಅವರು ಮನವಿಯಲ್ಲಿ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.