ಕಲಬುರಗಿ: ಭಾರತದ ದೇವ್ ಜೇವಿಯಾ, ಧೀರಜ್ ಕೆ. ಹಾಗೂ ಮನೀಶ್ ಸುರೇಶಕುಮಾರ ಅವರು ಇಲ್ಲಿ ನಡೆಯುತ್ತಿರುವ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 7ನೇ ಶ್ರೇಯಾಂಕಿತ ದೇವ್ ಜೇವಿಯಾ ಅವರು ಮನೀಶ್ ಗಣೇಶ ವಿರುದ್ಧ 6–4, 6–3ರಿಂದ ಗೆಲುವು ಸಾಧಿಸುವ ಮೂಲಕ 2ನೇ ಸುತ್ತಿಗೆ ಪ್ರವೇಶಿಸಿದರು. ಮನೀಶ್ ಸುರೇಶಕುಮಾರ ಅವರು ಸಿದ್ಧಾಂತ್ ಬಾಂಥಿಯಾ ಅವರನ್ನು 7–6(7–4), 6–4 ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು.
ಇನ್ನೊಂದು ಪಂದ್ಯದಲ್ಲಿ ಧೀರಜ್ ಕೆ. ಅವರು ಕೊರಿಯಾದ ಯುನ್ಸೆಕ್ ಜಾಂಗ್ ವಿರುದ್ಧ 6–0, 3–4 ಮುನ್ನಡೆಯಲ್ಲಿದ್ದರು. ಈ ವೇಳೆ ಲೈನ್ ಅಂಪೈರಿಂಗ್ ನೀಡಿದ ತೀರ್ಪಿನ ಕುರಿತು ಯುನ್ಸೆಕ್ ಅಸಮಾಧಾನ ವ್ಯಕ್ತಪಡಿಸಿದರು. ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸದೇ ಇದ್ದುದರಿಂದ ಅವರು ರೆಕೆಟ್ ಎಸೆದು ಪಂದ್ಯದಿಂದ ಹೊರನಡೆದರು.
ಸಿದ್ಧಾಂತ್–ವಿಷ್ಣುವರ್ಧನ್ ಜೋಡಿ ಕ್ವಾರ್ಟರ್ಗೆ:
ಡಬಲ್ಸ್ ವಿಭಾಗದಲ್ಲಿ 3ನೇ ಶ್ರೇಯಾಂಕದ ಸಿದ್ಧಾಂತ್ ಬಾಂಥಿಯಾ ಮತ್ತು ವಿಷ್ಣುವರ್ಧನ್ ಜೋಡಿಯು ರಾಘವ್ ಜೈಸಿಂಘಾನಿ ಮತ್ತು ಜಪಾನಿನ ಕಜುಕಿ ನಿಶಿವಾಕಿ ಜೋಡಿ ವಿರುದ್ಧ 6–3, 7–6(7–3)ರಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೇರಿತು.
4ನೇ ಶ್ರೇಯಾಂಕದ ಪರೀಕ್ಷಿತ್ ಸೋಮಾನಿ ಮತ್ತು ಮನೀಶ್ ಸುರೇಶ್ ಕುಮಾರ್ ಜೋಡಿಯು ಜರ್ಮನಿಯ ಲುಕಾನ್ ಡೆಲಿಯಾನೊ ಮತ್ತು ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ಜೋಡಿಯನ್ನು 6–1, 6–4ರಿಂದ ಪರಾಭವಗೊಳಿಸಿ ಎಂಟರ ಘಟ್ಟಕ್ಕೇರಿತು.
ಅಗ್ರ ಶ್ರೇಯಾಂಕದ ರಷ್ಯಾದ ಇಗೊರ್ ಅಗಾಫೋನೊವ್ ಹಾಗೂ ಬಾಗ್ದಾನ್ ಬಾಬ್ರೋವ್ ಜೋಡಿಯು ಭಾರತದ ಮನಸ್ ಧಾಮ್ನೆ ಮತ್ತು ಯುವಾನ್ ನಂದ್ಯಾಳ್ ಜೋಡಿಯನ್ನು 6–2, 6–3ರಿಂದ ಮಣಿಸಿತು.
ಇಂಡೋನೇಷ್ಯಾದ ಎಂ.ರಿಫ್ಕಿ ಫಿತ್ರಿಯಾದಿ ಮತ್ತು ಭಾರತದ ರಿಷಿ ರೆಡ್ಡಿ ಜೋಡಿಯು ಸಂದೇಶ್ ದತ್ತಾತ್ರೇಯ ಕುರಾಳೆ ಮತ್ತು ಪ್ರಸಾದ್ ಇಂಗಳೆ ಜೋಡಿಯನ್ನು 6–4, 7–6(7–5)ರಿಂದ ಪರಾಭವಗೊಳಿಸಿತು. ರಿಷಭ್ ಅಗರ್ವಾಲ್ ಮತ್ತು ಕಬೀರ್ ಹನ್ಸ್ ಜೋಡಿಯು ಆದಿತ್ಯ ಬಾಲಶೇಖರ ಮತ್ತು ರಷ್ಯಾದ ಮ್ಯಾಕ್ಸಿಮ್ ಜೋಡಿ ವಿರುದ್ಧ 6–2, 6–0ಯಿಂದ ಗೆಲುವು ಸಾಧಿಸಿತು.
ಅಮೆರಿಕದ ನಿಕ್ ಚಾಪೆಲ್ ಮತ್ತು ನಿತಿನ್ ಕುಮಾರ್ ಸಿನ್ಹಾ ಜೋಡಿಯು ಎಸ್.ಡಿ. ಪ್ರಜ್ವಲ್ ದೇವ್ ಮತ್ತು ಆದಿಲ್ ಕಲ್ಯಾಣಪುರ ಜೋಡಿಯನ್ನು 6–2, 3–6, 10–3ರಿಂದ ಮಣಿಸಿದರೆ, ಯಶ್ ಚೌರಾಸಿಯಾ ಮತ್ತು ಕರಣ್ ಸಿಂಗ್ ಜೋಡಿಯು ಪ್ರೀತಂ ಗಣೇಶ್ ಮತ್ತು ಚಂದನ ಶಿವರಾಜ್ ಜೋಡಿಯನ್ನು 6–2, 6–0ಯಿಂದ ಸೋಲಿಸಿತು. ಆದಿತ್ಯ ಗಣೇಶನ್ ಮತ್ತು ಆರ್ಯನ್ ಷಾ ಜೋಡಿಯು ಮನೀಶ್ ಗಣೇಶ ಮತ್ತು ಧೀರಜ್ ಕೆ. ಜೋಡಿಯನ್ನು 6–4, 7–5 ರಿಂದ ಮಣಿಸಿ ಕ್ವಾರ್ಟರ್ ಫೈನಲ್ಗೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.