ವಾಡಿ: ಮುಟ್ಟು ಎನ್ನುವುದು ಹೆಣ್ಣುಮಕ್ಕಳ ಜೀವನದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು, ಮುಟ್ಟಿನ ಸಮಯದಲ್ಲಿ ಅರೋಗ್ಯ ಸುರಕ್ಷತೆ ಬಹಳ ಮುಖ್ಯ ಎಂದು ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಬಾಬುರಾವ್ ಸಿ.ಬಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿ.ಪಂ, ಸಮುದಾಯ ಆರೋಗ್ಯ ಕೇಂದ್ರ, ಸಮುದಾಯದ ಸಹಬಾಗಿತ್ವದಡಿ ಲಾಡ್ಲಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾಠ್ಯಕ್ರಮದಡಿ ಅಂತರರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮುಟ್ಟಿನ ಬಗ್ಗೆ ಯಾವುದೇ ಮೂಢನಂಬಿಕೆ ಹಾಗೂ ಪೂರ್ವಾಗ್ರಹ ಇಟ್ಟುಕೊಳ್ಳದೇ ಆಯಾಸ ಪರಿಹಾರಕ್ಕೆ ದೈಹಿಕ ವಿಶ್ರಾಂತಿ ಅವಶ್ಯಕ ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಅಂಜು ಚವ್ಹಾಣ ಮಾತನಾಡಿ, ಮುಟ್ಟಾದರೆ ಮುಟ್ಟಿಸಿಕೊಳ್ಳಬಾರದು ಎನ್ನುವ ಮನಸ್ಥಿತಿ ಇಂದಿಗೂ ಸಮಾಜದಲ್ಲಿರುವುದು ಕಳವಳ ಸಂಗತಿ. ಜನರಲ್ಲಿ ಮೌಢ್ಯವನ್ನು ಸಾಕ್ಷರತೆ ಮೂಲಕ ತೊಡಗಿಸಲು ಸಾಧ್ಯವಿದೆ ಎಂದರು.
ಸಿಬ್ಬಂದಿ ಮೌನೇಶ ಪತ್ತಾರ ಮಾತನಾಡಿದರು.
ಮುಖಂಡ ಬಾಬು ದಂಡಬಾ, ಸಮುದಾಯ ಸಂಘಟಕರಾದ ಮಲ್ಲಮ್ಮ ನಾಟೇಕರ, ಮಂಜುಳಾ ಪೂಜಾರಿ, ಅಂಗನವಾಡಿ ಕಾರ್ಯಕರ್ತೆಯರಾದ ಜಯಶ್ರೀ ಕುಂಬಾರ, ಜಗದೇವಿ ಗುತ್ತೇದಾರ, ಮಂಜುಳಾ ಎಸ್ ಹಲಕರ್ಟಿ, ಗೌರಮ್ಮ ಎಸ್, ಆಶಾ ಕಾರ್ಯಕರ್ತೆಯರಾದ ಗಿರಿಜಾ ಕುಂಬಾರ, ಅವ್ವಮ್ಮ ನಾಟೇಕರ, ಹೇಮಾವತಿ ವಡ್ಡರ ಹಾಗೂ ಯುವತಿಯರು, ಮಹಿಳೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.