ವಾಡಿ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ವಾಡಿ ಸಮೀಪದ ಹಲಕರ್ಟಿ ಗ್ರಾ.ಪಂ ಕಚೇರಿ ಮುಂದೆ ಬಸವ ಜಯಂತಿಯಂದು ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿದ್ದ ಬಸವೇಶ್ವರರ ಚಿತ್ರವನ್ನು ಮಂಗಳವಾರ ರಾತ್ರಿ ಅಲ್ಲಲ್ಲಿ ಸುಟ್ಟು ಕಿಡಿಗೇಡಿಗಳು ವಿಕೃತಿ ನಡೆಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೀರಶೈವ– ಲಿಂಗಾಯತ ಸಮಾಜದವರು ಗ್ರಾಮದ ಬಳಿಯ ಕಲಬುರಗಿ– ಯಾದಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬುಧವಾರ ತಡೆದು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ವೀರಶೈವ– ಲಿಂಗಾಯತ ಟ್ರಸ್ಟ್ ವತಿಯಿಂದ ಬಸವೇಶ್ವರರ ಭಾವಚಿತ್ರವುಳ್ಳ ದೊಡ್ಡ ಫ್ಲೆಕ್ಸ್ ಕಟ್ಟಲಾಗಿತ್ತು. ರಾತ್ರಿ ವೇಳೆ ಕಿಡಿಗೇಡಿಗಳು ಫೋಟೊದ ಹಲವೆಡೆ ಸುಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿ, ಆರೋಪಿಗಳ ಪತ್ತೆಗೆ ಆಗ್ರಹಿಸಿದರು.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆದಿದ್ದರಿಂದ ಹೆದ್ದಾರಿಯ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.