ADVERTISEMENT

ಚಿತ್ತಾಪುರ | ಹಜರತ್ ಸೈಯದ್ ಪೀರ್ ದರ್ಗಾ‌ ಧ್ವಂಸಗೊಳಿಸಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 9:57 IST
Last Updated 10 ಅಕ್ಟೋಬರ್ 2024, 9:57 IST
<div class="paragraphs"><p>ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮ ಸಮೀಪದಲ್ಲಿ ಧ್ವಂಸಗೊಂಡ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು</p></div>

ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮ ಸಮೀಪದಲ್ಲಿ ಧ್ವಂಸಗೊಂಡ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು

   

ಚಿತ್ತಾಪುರ (ಕಲಬುರಗಿ ಜಿಲ್ಲೆ): ಇಲ್ಲಿಂದ ಕರದಾಳ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿದ್ದ ಹಜರತ್ ಸೈಯದ್ ಪೀರ್ ದರ್ಗಾವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ಹಜರತ್ ಸೈಯದ್ ಪೀರ್ ದರ್ಗಾದಲ್ಲಿನ ಮಜಾರ್ (ಸಮಾಧಿ) ಕಿತ್ತು ಹಾಕಿದ ಕಿಡಿಗೇಡಿಗಳು ಮಜಾರ್, ಸುತ್ತಲೂ ಕಟ್ಟಿದ ತಡೆಗೋಡೆಯ ಕಲ್ಲುಗಳನ್ನು ನೆಲಕ್ಕುರುಳಿಸಿದ್ದಾರೆ.

ADVERTISEMENT

ಬುಧವಾರ ತಡರಾತ್ರಿ ಈ ಕೃತ್ಯ ನಡೆದಿದ್ದು, ಗುರುವಾರ ಬೆಳಿಗ್ಗೆಯಿಂದ ನೂರಾರು ಜನರು ದರ್ಗಾಗೆ ಭೇಟಿ ನೀಡಿ, ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಬದಿಯಲ್ಲಿದ್ದ ಹಜರತ್ ಸೈಯದ್ ಪೀರ್ ದರ್ಗಾ ಕಟ್ಟಡಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು ದರ್ಗಾ ಮುಂಭಾಗದಲ್ಲಿನ ಹೊಲದಲ್ಲಿ ಇದ್ದ ಮತ್ತೊಂದು ಸಣ್ಣದಾದ ಮಜಾರ್ (ಸಮಾಧಿ) ಕಿತ್ತು ಹಾಕಿ ದುಷ್ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದರ್ಗಾ ಧ್ವಂಸ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್ಐ ಶ್ರೀಶೈಲ್ ಅಂಬಾಟಿ (ಕಾ ಮತ್ತು ಸು), ಪಿಎಸ್ಐ ಚಂದ್ರಾಮಪ್ಪ (ತನಿಖೆ) ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದರ್ಗಾದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೈಯದ್ ಅಲಿ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ದರ್ಗಾದಲ್ಲಿನ ಮಜಾರ್ ಕಿತ್ತು ಹಾಕಿ ಕಟ್ಟಡಕ್ಕೆ ಹಾನಿ ಮಾಡಿರುವ ಪ್ರಕರಣದ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಿಡಿಗೇಡಿಗಳ ಪತ್ತೆಗೆ ಮನವಿ:

ಹಜರತ್ ಸೈಯದ್ ಪೀರ್ ದರ್ಗಾದಲ್ಲಿ ಮಜಾರ್ ಕಿತ್ತುಹಾಕಿ ಕಟ್ಟಡಕ್ಕೆ ಹಾನಿ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ‌ ಕೈಗೊಳ್ಳಬೇಕು ಎಂದು ದರ್ಗಾದ ಉಸ್ತುವಾರಿ ಸೈಯದ್ ಅಲಿ ಅವರು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.