ADVERTISEMENT

ಚಿಂಚೋಳಿ | ಮೋದಿ ಜನ್ಮದಿನಾಚರಣೆ: ವಿವಿಧ ಚಟುವಟಿಕೆ 

ಕುಂಚಾವರಂ: ಶಾಸಕ ಡಾ.ಅವಿನಾಶ ಜಾಧವ ಅವರಿಂದ ಸ್ವಚ್ಛತಾ ಸೇವಾ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 15:26 IST
Last Updated 22 ಸೆಪ್ಟೆಂಬರ್ 2024, 15:26 IST
ಚಿಂಚೋಳಿ ತಾಲ್ಲೂಕು ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶಾಸಕ ಡಾ.ಅವಿನಾಶ ಜಾಧವ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯ ಕೈಗೊಂಡರು
ಚಿಂಚೋಳಿ ತಾಲ್ಲೂಕು ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶಾಸಕ ಡಾ.ಅವಿನಾಶ ಜಾಧವ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯ ಕೈಗೊಂಡರು    

ಚಿಂಚೋಳಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಪ್ರಯುಕ್ತ ತಾಲ್ಲೂಕಿನ ವಿವಿಧೆಡೆ ಶಾಸಕ ಡಾ.ಅವಿನಾಶ ಜಾಧವ ಅವರು ಸ್ವಚ್ಛತೆಗಾಗಿ ಸೇವಾ ಸಪ್ತಾಹದ ಅಂಗವಾಗಿ ವಿವಿಧ ಚಟುವಟಿಕೆ ನಡೆಸಿದರು.

ತಾಲ್ಲೂಕಿನ ಕುಂಚಾವರಂನಲ್ಲಿ ಸಸಿಗಳನ್ನು ನೆಟ್ಟು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆಗಾಗಿ ಶ್ರಮದಾನ ನಡೆಸಿ ಕಸ ಗೂಡಿಸಿದರು. ನಂತರ ಶಾದಿಪುರ, ಕುಂಚಾವರಂ ಹಾಗೂ ಒಂಟಿಚಿಂತಾ ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಿದರು.

‘ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ ಶಾಸಕ ಡಾ.ಅವಿನಾಶ ಜಾಧವ ಮುಂಬರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಟಿಕೆಟ್ ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನಡೆಸಬೇಕು’ ಎಂದು ಕೋರಿದರು.

ADVERTISEMENT

ವಿಶ್ವದ ಅತಿದೊಡ್ಡ ಪಕ್ಷ ಎಂಬ ಹೆಗ್ಗಳಿಕೆ ಹೊಂದಿರುವ ಬಿಜೆಪಿಯ ಸದಸ್ಯತ್ವ ಪಡೆಯುವುದು ಹೆಮ್ಮೆಯ ಪ್ರತೀಕವಾಗಿದೆ. ಪ್ರತಿಯೊಬ್ಬರು ಸದಸ್ಯತ್ವ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.

ಅಶೋಕ ಮೊಗದಂಪುರ, ಗೋಪಾಲರಡ್ಡಿ ಕಸ್ತೂರಿ, ಚನ್ನಯ್ಯ ಸೇಠ, ಸಂಜೀವ ಕೊಂಡ, ಎಲ್.ವೆಂಕಟರಡ್ಡಿ, ಉಮಾಪತಿ, ಶಹಾಜಿರಾವ್ ಶಾದಿಪುರ, ಗಿರಿರಾಜ ನಾಟಿಕಾರ, ವಿಜಯಕುಮಾರ ರಾಠೋಡ್, ಗೋಪಾಲ ಬ್ಯಾಗೇರಿ, ಉಮಾಪತಿ, ವಿಠಲ ಕಾರಭಾರಿ, ರಾಜು ರಾಠೋಡ್, ವಿಜಯಕುಮಾರ ರಾಠೋಡ್, ನಾಗಮ್ಮ, ಭೀಮಶೆಟ್ಟಿ ಮುರುಡಾ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ಚಂದ್ರಶೆಟ್ಟಿ ಜಾಧವ, ಶ್ರೀನಿವಾಸ ಚಿಂಚೋಳಿಕರ್, ಚಂದ್ರಶೆಟ್ಟಿ, ಲಿಂಬಾಜಿ, ಅನಂತಯ್ಯ ಗೊಲ್ಲ, ರಿಯಾಜುದ್ದಿನ್ ಸೇರಿದಂತೆ ಹಲವರು ಹಾಜರಿದ್ದರು.

10,500 ಸದಸ್ಯತ್ವ: ‘ಚಿಂಚೋಳಿ ಮತಕ್ಷೇತ್ರದಲ್ಲಿ 10,500 ಬಿಜೆಪಿ ಸದಸ್ಯರ ನೋಂದಣಿಯಾಗಿದೆ’ ಎಂದು ಸಂಯೋಜಕ ಸಂತೋಷ ಗಡಂತಿ ತಿಳಿಸಿದರು.

‘ಸೆಪ್ಟೆಂಬರ್ ಮೊದಲ ವಾರದಿಂದ ಪ್ರಾರಂಭವಾದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಈ ಹಿಂದೆ ಸದಸ್ಯತ್ವ ಪಡೆದವರು ಮತ್ತೆ ಪಡೆಯಬೇಕಾಗಿರುವುದರಿಂದ ಬಿಜೆಪಿ ಕಾರ್ಯಕರ್ತರು, ಜನಸಾಮಾನ್ಯರು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸದಸ್ಯತ್ವ ಪಡೆಯುತ್ತಿದ್ದಾರೆ’ ಎಂದರು.

ಚಿಂಚೋಳಿ ತಾಲ್ಲೂಕು ಕುಂಚಾವರಂನ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳಿಗೆ ಶಾಸಕ ಡಾ.ಅವಿನಾಶ ಜಾಧವ ಸಸಿಗಳನ್ನು ವಿತರಿಸಿ ಮಕ್ಕಳೊಂದಿಗೆ ಭಾನುವಾರ ಸಸಿಗಳನ್ನು ನೆಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.