ಕಮಲಾಪುರ: ‘ದೇಶದಲ್ಲಿ ನಿರಂಕುಶ ಪ್ರಭುತ್ವ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹೆದರುವುದು ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ’ ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.
ತಾಲ್ಲೂಕಿನ ಓಕಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರ ಮೂಲಕ ಪಿತೂರಿ ನಡೆಸಿ ಖರ್ಗೆಯವರನ್ನು ಸೋಲಿಸಿದೆ. ಕಾಂಗ್ರೆಸ್ ಮೇಲೆ ಮುಗಿ ಬೀಳುವ ಮಾಧ್ಯಮಗಳು ಮಂಕಾಗಿವೆ’ ಎಂದರು.
‘ಸೋಲಿನ ಭಯದಿಂದ ಖರ್ಗೆ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎಂದು ಬಿಜೆಪಿಯವರು ಬಾಯಿಬಡಿದುಕೊಳ್ಳುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ದೇಶದಾದ್ಯಂತ ಸಂಚರಿಸಿ ಚುನಾವಣೆ ಎದುರಿಸಬೇಕು. ಮುಂದಿನ ಪ್ರಧಾನಿ ಅಭ್ಯರ್ಥಿಯು ಅವರೆ ಆಗಿದ್ದಾರೆ’ ಎಂದರು.
ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಬಿ. ಪಾಟೀಲ ಓಕಳಿ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ವಿಜಯಕುಮಾರ ಜಿ. ರಾಮಕೃಷ್ಣ, ಮಲ್ಲಿನಾಥ ಪಾಟೀಲ ಅವರು ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಬಸಪ್ಪ ಪಾಟೀಲ, ಜಯರಾಜ ಪಾಟೀಲ ಓಕಳಿ, ನಿರ್ಮಲಾ ಬರಗಾಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಶೇರಿ, ಗುರುರಾಜ ಮಾಟೂರ, ಕಾರ್ತಿಕ ನಾಟೀಕಾರ, ಭೀಮನಗೌಡ ಪರಗೊಂಡ, ಇಬ್ರಾಹಿಂಸಾಬ್ ಅತ್ತಾರ್, ಅಮರ ಚಿಕ್ಕೆಗೌಡ, ಬಸವರಾಜ ಮಠಪತಿ, ಪ್ರಶಾಂತ ಮಾನಕಾರ, ಶರಣು ಗೌರೆ, ವಿಜಯಕುಮಾರ ಶೆಟ್ಟಿ, ಮಲ್ಲಣ್ಣ ಪಾಟೀಲ, ನಾಗರಾಜ ಭಾವಿಮನಿ, ಸುಭಾಷ ಓಕಳಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.