ಶಹಾಬಾದ್: ನಗರಸಭೆಯ ವಾರ್ಡ್ ನಂ 3ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಾಜಿದ್ ಖಾನ್ ಜಮಾದಾರ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ ಅವರ ಸಮ್ಮುಖದಲ್ಲಿ ಮಂಗಳವಾರ ಮತ ಎಣಿಕೆ ಮಾಡಿದಾಗ ವಾಜಿದ್ ಖಾನ್ 463 ಮತ ಪಡೆದರೆ, ಬಿಜೆಪಿಯ ಜಯಶ್ರೀ ಅರುಣ್ ಜಾಯಿ 149 ಮತಗಳು ಹಾಗೂ 9 ನೋಟಾ ಮತ ಚಲಾವಣೆ ಆಗಿದ್ದು ಗೊತ್ತಾಯಿತು.
ವಾಜಿದ್ ಖಾನ್ 314 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರು.
ಮುಖ್ಯ ಚುನಾವಣಾಧಿಕಾರಿ ಬಾಲರಾಜ ಮಾಚನೂರ, ಶರಣು ಪಾಟೀಲ, ಗೋವರ್ಧನ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಚುನಾಯಿತ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದರು.
ವಿಜಯೋತ್ಸವ: ವಾಜಿದ್ ಖಾನ್ ಗೆಲುವಿನ ಸೂಚನೆ ಸಿಗುತ್ತಿರುವಂತೆ ಕಾಂಗ್ರಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲ್ ಎರಚಿ ಸಂಭ್ರಮಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ ರಶೀದ್, ನಗರಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತ್ರಿ, ಉಪಾಧ್ಯಕ್ಷೆ ಫಾತಿಮಾ ಬಾಕ್ರೋದ್ದಿನ, ಮೃತ್ಯುಂಜಯ ಹಿರೇಮಠ, ಅಹ್ಮದ್ ಪಟೇಲ, ನಾಗೇಂದ್ರ ನಾಟೀಕಾರ, ರಾಜೇಶ ಯನಗುಂಟಿಕರ, ಹಾಸಮ್ ಖಾನ್, ಶರಣು ಪಗಲಾಪುರ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.