ADVERTISEMENT

ನಾಡಿಗಾಗಿ ಶಕ್ತಿಮೀರಿ ದುಡಿದ ಎನ್‌.ಧರ್ಮಸಿಂಗ್ :ಎಸ್.ಎನ್.ಭೋಸರಾಜು

ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 14:03 IST
Last Updated 25 ಡಿಸೆಂಬರ್ 2019, 14:03 IST
ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಧರ್ಮಪ್ರಜೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಎಸ್.ಎನ್.ಭೋಸರಾಜು, ಶಾಸಕ ಶರಣಬಸಪ್ಪ ದರ್ಶನಾಪುರ, ವಿಜಯಕುಮಾರ ತೇಗಲತಿಪ್ಪಿ, ಅಲ್ಲಮಪ್ರಭು ಪಾಟೀಲ, ಚಂದ್ರಿಕಾ ಪರಮೇಶ್ವರ, ಡಾ.ವಿ.ಜಿ.ಅಂದಾನಿ ಇತರರು ಇದ್ದರು
ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಧರ್ಮಪ್ರಜೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಎಸ್.ಎನ್.ಭೋಸರಾಜು, ಶಾಸಕ ಶರಣಬಸಪ್ಪ ದರ್ಶನಾಪುರ, ವಿಜಯಕುಮಾರ ತೇಗಲತಿಪ್ಪಿ, ಅಲ್ಲಮಪ್ರಭು ಪಾಟೀಲ, ಚಂದ್ರಿಕಾ ಪರಮೇಶ್ವರ, ಡಾ.ವಿ.ಜಿ.ಅಂದಾನಿ ಇತರರು ಇದ್ದರು   

ಕಲಬುರ್ಗಿ: ಧರ್ಮ, ಜಾತಿ, ಮತ ಪಂಗಡಗಳನ್ನು ಮೀರಿ ಸರ್ವಜನಾಂಗದ ನಾಯಕರಾಗಿ ಮೆರೆದವರು ದಿ ಡಾ.ಎನ್.ಧರ್ಮಸಿಂಗ್‍. ಈ ನಾಡಿಗಾಗಿ ತಮ್ಮ ಶಕ್ತಿ ಮೀರಿ ದುಡಿದವರಾಗಿದ್ದು, ಖರ್ಗೆ ಹಾಗೂ ಧರ್ಮಸಿಂಗ್‍ಅವರ ಸ್ನೇಹ ಭಾರತದ ರಾಜಕಾರಣದಲ್ಲಿಯೇ ಗುರುತಿಸುವಂತಹದ್ದಾಗಿದೆ ಎಂದು ಎಐಸಿಸಿ ಕಾರ್ಯದರ್ಶಿಯೂ ಆದ ವಿಧಾನ ಪರಿಷತ್‌ ಸದಸ್ಯ ಎಸ್.ಎನ್.ಭೋಸರಾಜು ಅಭಿಪ್ರಾಯಪಟ್ಟರು.

ಧರ್ಮಸಿಂಗ್ ಅವರ 83ನೇ ಜನ್ಮದಿನದಂಗವಾಗಿ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ದಿ ಐಡಿಯಲ್ ಫೈನ್ ಆರ್ಟ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರಖಾಸಿಂ ಪಟೇಲ್ ಪೊಲೀಸ್ ಪಾಟೀಲ ಮುದಬಾಳ (ಬಿ), ಧರ್ಮರಾಯ ಗುಜಗೊಂಡ ನೆಲೋಗಿ, ಚಂದ್ರಶೇಖರ ಪುರಾಣಿಕ ಯಡ್ರಾಮಿ, ಶರಣಪ್ಪಗೌಡ ಪೇಠ ಪಾಟೀಲ ಕೋಳಕೂರ, ಶೈಲಜಾ ಪಾಟೀಲ ಅವರಿಗೆ ‘ಧರ್ಮಪ್ರಜೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಶರಣಬಸಪ್ಪ ದರ್ಶನಾಪುರ, ‘ರಾಜಕೀಯ ವಲಯದಲ್ಲಿ ಅತ್ಯಂತ ಪಾರದರ್ಶಕ ಹಾಗೂ ಆತ್ಮೀಯತೆಯನ್ನು ಮೆರೆದಂತಹ ಜನನಾಯಕ ಧರ್ಮಸಿಂಗ್ ಅವರಾಗಿದ್ದಾರೆ. ಪದಗಳಿಗೆ ನಿಲುಕದ ಉದಾತ್ತ ವ್ಯಕ್ತಿತ್ವ ಅವರದು. ಸಾರ್ವಜನಿಕರನ್ನು ಸನಿಹ ಕರೆದು ಅಪ್ಪಿಕೊಳ್ಳುವ ಆದರ್ಶಮಯ–ಕರುಣಾಮಯಿ ಹೃದಯಿಗಳಾಗಿ ಅಕ್ಷರಶಃ ಅಜಾತ ಶತ್ರುಗಳಾಗಿದ್ದರು’ ಎಂದರು.

ADVERTISEMENT

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಧರ್ಮಸಿಂಗ್ ಅವರ ಜನ್ಮದಿನವನ್ನು ಕುಟುಂಬಕ್ಕೆ ಮೀಸಲಾಗಿರಿಸದೇ, ಅದನ್ನು ಸಾರ್ವತ್ರಿಕವಾಗಿ ಆಚರಿಸಿ, ಅವರ ಹೆಸರಿನ ಮೇಲೆ ಅವರ ಒಡನಾಡಿಗಳಾದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.

ಹಿರಿಯ ಚಿತ್ರಕಲಾವಿದ ಡಾ.ವಿ.ಜಿ.ಅಂದಾನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.