ADVERTISEMENT

ಕಲಬುರಗಿಯಲ್ಲಿ ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್‌ಪೋ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:48 IST
Last Updated 11 ಜುಲೈ 2024, 15:48 IST
ಕಲಬುರಗಿಯ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ನ್ಯೂ ಇಂಡಿಯನ್‌ ಕ್ರಾಫ್ಟ್ ಎಕ್ಸ್‌ಪೋದಲ್ಲಿ ಗ್ರಾಹಕರು ಖರೀದಿಯಲ್ಲಿ ತೊಡಗಿರುವುದು
ಕಲಬುರಗಿಯ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ನ್ಯೂ ಇಂಡಿಯನ್‌ ಕ್ರಾಫ್ಟ್ ಎಕ್ಸ್‌ಪೋದಲ್ಲಿ ಗ್ರಾಹಕರು ಖರೀದಿಯಲ್ಲಿ ತೊಡಗಿರುವುದು   

ಕಲಬುರಗಿ: ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಜೂನ್‌ 26ರಿಂದ ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್‌ಪೋ ಆರಂಭವಾಗಿದ್ದು, ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಶುರುವಾಗಿದೆ.

ಮೇಳದಲ್ಲಿ ಕೈಯಿಂದ ಸಿದ್ಧಪಡಿಸಿದ ಉಡುಗೊರೆಗಳು, ಉತ್ಪನ್ನಗಳು, ಆಭರಣಗಳು, ಟೆರಾಕೋಟಾ ಗೃಹ ಅಲಂಕಾರ ವಿಭಾಗದಲ್ಲಿ ತುಳಸಿ ಸ್ಟ್ಯಾಂಡ್‌ಗಳು, ಹೂವಿನ ಕುಂಡಗಳು, ನೀರಿನ ಕಾರಂಜಿಗಳು, ತಬಲಾ ಸ್ಟ್ಯಾಂಡ್‌ಗಳು, ವಾಲ್ ಹ್ಯಾಂಗಿಂಗ್‌ಗಳು ಮತ್ತು ಶೋಪೀಸ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ.

ಉತ್ತರ ಪ್ರದೇಶದಲ್ಲಿ ತಯಾರಿಸಲಾದ ವಿಶ್ವ ಪ್ರಸಿದ್ಧ ಖುರ್ಜಾ ಹೂವಿನ ಕುಂಡಗಳು, ಜಾಡಿಗಳು, ಕಡಿಮೆ ತೂಕದ ಡಿನ್ನರ್ ಸೆಟ್‌ಗಳು, ಪ್ಲೇಟ್‌ಗಳು, ಬೋನ್ ಚೈನಾ ಕಪ್‌ಗಳು, ಜತೆಗೆ ಖಾದಿ ಉತ್ಪನ್ನಗಳು, ವಿವಿಧ ವಿನ್ಯಾಸದ ಪುರಷರ ಹಾಗೂ ಮಹಿಳೆಯರ ಉಡುಪುಗಳು, ಹರ್ಬಲ್ ಉತ್ಪನ್ನಗಳು, ಹೋಮ್‌ವೇರ್ ಪುಸ್ತಕಗಳು, ಖಾದಿಯ ಫ್ಯಾಬ್ರಿಕ್ಸ್ ಪುಸ್ತಕಗಳು, ಚರ್ಮದ ವಸ್ತುಗಳು, ಬೆಡ್ ಶೀಟ್‌ಗಳು, ಮರದ ಕೆತ್ತನೆಗಳು, ಲೋಹದ ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ರೀತಿಯ ನೂರಾರು ಉತ್ಪನ್ನಗಳು ಮೇಳದಲ್ಲಿ ಲಭ್ಯವಿದ್ದು, ಶೇ 20ರವರೆಗೆ ರಿಯಾಯಿತಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ADVERTISEMENT

ಪ್ರವೇಶ ಮತ್ತು ಪಾರ್ಕಿಂಗ್ ಉಚಿತ, ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಘಟಕರಾದ ಅಶುತೋಷ ಶರ್ಮಾ ಮತ್ತು ಪ್ರಕಾಶ ಕಲ್ಕುಂದ್ರಿಕರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.