ADVERTISEMENT

ಎನ್ಎಸ್ಎಸ್ ವಿಶೇಷ ಶಿಬಿರ: ಜೀವನ ಶಿಕ್ಷಣ ಪಡೆಯಲು ಚಂದ್ರಶೇಖರ ದೊಡ್ಡಮನಿ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 15:54 IST
Last Updated 24 ಡಿಸೆಂಬರ್ 2023, 15:54 IST
<div class="paragraphs"><p>ಕಲಬುರಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಎಂಪಿಎಚ್ಎಸ್) ಶನಿವಾರ ನಡೆದ ಎನ್ಎಸ್ಎಸ್ ವಿಶೇಷ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು</p></div>

ಕಲಬುರಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಎಂಪಿಎಚ್ಎಸ್) ಶನಿವಾರ ನಡೆದ ಎನ್ಎಸ್ಎಸ್ ವಿಶೇಷ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು

   

ಕಲಬುರಗಿ: ‘ವಿದ್ಯಾರ್ಥಿಗಳು ಜೀವನೋಪಾಯ ಶಿಕ್ಷಣದ ಜತೆಗೆ ಜೀವನ ಶಿಕ್ಷಣವೂ ಪಡೆಯಬೇಕು. ಬಲವಂತವಾಗಿ ಔಷಧ ನೀಡಿ ರೋಗಿಗಳ ರೋಗವನ್ನು ಗುಣಪಡಿಸುವಂತೆ ಯುವ ಪೀಳಿಗೆಗೆ ಬಲವಂತವಾಗಿ ಸಾಮಾಜಿಕ ಮತ್ತು ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಅನಿವಾರ್ಯತೆ ಬಂದಿದೆ’ ಎಂದು ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಚಂದ್ರಶೇಖರ ದೊಡ್ಡಮನಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಎಂಪಿಎಚ್ಎಸ್) ಶನಿವಾರ ನಡೆದ ಎನ್ಎಸ್ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ವಿದ್ಯಾರ್ಥಿಗಳು ಸರ್ವೋದಯ ಸಮಾಜ ನಿರ್ಮಾಣ ಮಾಡುವ ಮೂಲಕ ಆರೋಗ್ಯವಂತ ಭಾರತ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

ಮಹಿಳಾ ಚಿಂತಕಿ ಕೆ. ನೀಲಾ ಮಾತನಾಡಿ, ‘ವಿದ್ಯಾರ್ಥಿಗಳು ಗ್ರಾಮೀಣ ಜನರಿಗೆ ನೈರ್ಮಲ್ಯತೆ, ಆರೋಗ್ಯ, ಅಕ್ಷರ ಹಾಗೂ ಸಾಮಾಜಿಕ ಸಮಾನತೆ ಅರಿವನ್ನು ಮೂಡಿಸಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಶಂಶುದ್ದೀನ್ ಪಟೇಲ್ ವಹಿಸಿದ್ದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಯಶ್ರೀ ತಳಕೇರಿ, ಎನ್ಎಸ್ಎಸ್ ಅಧಿಕಾರಿಗಳಾದ ರಾಜೇಂದ್ರ ಬಿ.ದೊಡ್ಡಮನಿ, ಬಿ.ಎಸ್. ಮಾಲಿಪಾಟೀಲ, ಅಶೋಕ ತಳಕೇರಿ, ಗುರುದತ್ತ ಪಿ. ಕುಲಕರ್ಣಿ, ದೇವಿದಾಸ ಪವಾರ, ಆರ್‌. ಸುಭಾಷ್ ಚಂದ್ರ, ಕೆ. ನಾಗಪ್ಪ, ಸಂಗೀತಾ ಕಪೂರ್, ಜ್ಯೋತಿ ಹೊಸಮನಿ, ಸುಭೋದಿನಿ ಜಹಗೀರದಾರ್, ಚಿತಂಬರಾವ್ ಮೇತ್ರಿ, ಮರಿಯಪ್ಪ ಗೋನಾಲಕರ್, ಶಾಹಿನ್ ಕೌಸರ್, ಭಾಗ್ಯಶ್ರೀ ಕುಲಕರ್ಣಿ, ವೀರಭದ್ರಯ್ಯ ಸ್ವಾಮಿ, ಸತೀಶ್ ಕಟಕೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.