ಕಲಬುರಗಿ: ‘ಜಾತಿ ಗಣತಿ ವಿರೋಧಿಸುವ ಬದಲು ಅದನ್ನು ಸ್ವಾಗತಿಸಬೇಕು. ವರದಿ ಜಾರಿ ಬಳಿಕ ಅದರಲ್ಲಿನ ಏರುಪೇರು ಮತ್ತು ನ್ಯೂನತೆಗಳ ಬಗ್ಗೆ ಚರ್ಚೆಯಾದರೆ ಸರ್ಕಾರವೇ ಮುಂದೆ ಕ್ರಮ ತೆಗೆದುಕೊಳ್ಳಲಿ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜನಸಂಖ್ಯೆಯ ಬಲ ತೋರಿಸಿ ಯಾರ ಮೇಲೂ ಬಲ ಪ್ರಯೋಗ ಮಾಡುವಂತಿಲ್ಲ. ಅದು ನಮ್ಮ ಅಸ್ಮಿತೆ, ಸಮಾಜದ ಗೌರವದ ಪ್ರಶ್ನೆಯಾಗಿದೆ. ಇಂತಹ ಸಂಕೀರ್ಣ ಸಮಾಜದಲ್ಲಿ ಯಾರು ಯಾರನ್ನು ತುಳಿದಿದ್ದಾರೆ? ಯಾರು ತುಳಿತಕ್ಕೆ ಒಳಪಟ್ಟಿದ್ದಾರೆ? ಯಾರು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ? ಸಮಾಜದ ದೃಷ್ಟಿಯಿಂದ ಯಾರು ಕೆಳ ಮಟ್ಟದಲ್ಲಿದ್ದಾರೆ ಎಂಬೆಲ್ಲ ಅಂಶಗಳು ಅದರಲ್ಲಿವೆ’ ಎಂದರು.
‘ಜನ ಗಣತಿ ವೇಳೆ ನಾವೇ ತಪ್ಪು ಮಾಡಿ 108 ಜಾತಿಗಳ ಹೆಸರುಗಳನ್ನು ಬರೆಯಿಸಿದ್ದೇವೆ. ಅಲ್ಲಿ ನಮ್ಮ ಸಂಖ್ಯಾಬಲವೇ ಸಿಗುವುದಿಲ್ಲ. ಪ್ರಜ್ಞೆ ಇಲ್ಲದೆ ತಪ್ಪು ಮಾಡಿದ್ದೇವೆ. ಅಪಾರ್ಥ ಮಾಡಿಕೊಳ್ಳದೆ ಎಚ್ಚರಿಕೆಯ ಹೆಜ್ಜೆ ಇರಿಸಬೇಕು. ಜಾತಿಗಣತಿ ವೈಜ್ಞಾನಿಕವಾಗಿ ಇರಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.