ADVERTISEMENT

ಮಲಬಾರ್‌ನಿಂದ 313 ವಿದ್ಯಾರ್ಥಿನಿಯರಿಗೆ ₹ 25.94 ಲಕ್ಷ ಶಿಷ್ಯವೇತನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 13:51 IST
Last Updated 22 ಜನವರಿ 2022, 13:51 IST
ಕಲಬುರಗಿಯ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಲಬಾರ್‌ ಸಂಸ್ಥೆಯಿಂದ ಶಿಷ್ಯವೇತನ ವಿತರಿಸಲಾಯಿತು
ಕಲಬುರಗಿಯ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಲಬಾರ್‌ ಸಂಸ್ಥೆಯಿಂದ ಶಿಷ್ಯವೇತನ ವಿತರಿಸಲಾಯಿತು   

ಕಲಬುರಗಿ: ಇಲ್ಲಿಯ ಸ್ಟೇಷನ್‌ ರಸ್ತೆಯಲ್ಲಿರುವ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ ಮಳಿಗೆ ಹಾಗೂ ಮಲಬಾರ್ ಚಾರಿಟೆಬಲ್‌ ಟ್ರಸ್ಟ್‌ನಿಂದ 313 ವಿದ್ಯಾರ್ಥಿಗಳಿಗೆ ಒಟ್ಟು ₹ 25.94 ಲಕ್ಷ ಮೊತ್ತದ ಶಿಷ್ಯವೇತನ ವಿತರಿಸಲಾಯಿತು.

ನಗರದ ಕೆಬಿಎನ್‌ ಆಸ್ಪತ್ರೆ ಎದುರು ಇರುವ ಅಂಜುಮನ್‌ ತರಕೇ ಐವಾನ್–ಎ–ಉರ್ದು ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್‌ ಫಾತಿಮಾ, ಫರಾಜ್‌ ಇಸ್ಲಾಂ, ಆದಿಲ್‌ ಸುಲೇಮಾನ್‌ ಸೇಠ, ಮಾಜಿ ಮಹಾಪೌರ ಸೈಯದ್‌ ಅಹ್ಮದ್‌, ಮಜರ್‌ ಅಲಂ ಖಾನ್‌, ವಹಾಬ್ ಬಾಬ, ಅತೀಕ್‌ ಎನ್‌.ಆರ್‌.ಐ., ಬಿಬಿ ರಜಾ ಕಾಲೇಜಿನ ಪ್ರಾಚಾರ್ಯರಾದ ಡಾ.ಜೇಬಾ ಪರ್ವಿನ್‌, ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ನ ಕಲಬುರಗಿಯ ನಿರ್ದೇಶಕ ಮನಸೂರ್‌ ಕೆ., ಮಾರುಕಟ್ಟೆ ವ್ಯವಸ್ಥಾಪಕ ಅಬ್ದುಲ್‌ ಗಫೂರ ಉಪಸ್ಥಿತರಿದ್ದರು.

ಇಲ್ಲಿಯ ಪೊಲೀಸ್‌ ಭವನದ ಬಳಿಯ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿಯೂ ವಿದ್ಯಾರ್ಥಿನಿಯರಿಗೆ ಶಿಷ್ಯವೇತನದ ಚೆಕ್‌ ವಿತರಿಸುವ ಕಾರ್ಯಕ್ರಮ ನಡೆಯಿತು. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಇಲಿಯಾಸ ಸೇಠ ಬಾಗವಾನ, ನಿವೃತ್ತ ಪ್ರಾಚಾರ್ಯ ಶಿವಾಜಿ ಪಾಟೀಲ, ಪ್ರಾಚಾರ್ಯ ದೇವನಗೌಡ ಪಾಟೀಲ, ಯಶವಂತ ಸೂರ್ಯವಂಶಿ, ಇರ್ಫಾನ್‌, ಮನಸೂರ್‌ ಕೆ ಮತ್ತು ಅಬ್ದುಲ್‌ ಗಫೂರ್‌ ಇದ್ದರು. ರಾಜೇಂದ್ರ ಶಾದಿ ಕಾರ್ಯಕ್ರಮ ನಿರೂಪಿಸಿದರು.

ADVERTISEMENT

ಬಿಬಿ ರಜಾ ಕಾಲೇಜಿನ 167 ಹಾಗೂ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ 146 ಸೇರಿ ಒಟ್ಟು 313 ಬಡ ವಿದ್ಯಾರ್ಥಿನಿಯರಿಗೆ ಚೆಕ್‌ ವತರಿಸಲಾಯಿತು.

ಉಭಯ ಕಾಲೇಜುಗಳ ಬೋಧಕರು, ಸಿಬ್ಬಂದಿ ಹಾಗೂ ಮಲಬಾರ್‌ ಮಳಿಗೆಯ ಸಿಬ್ಬಂದಿ ಇದ್ದರು. ಶಿಷ್ಯವೇತನದ ಮಾಹಿತಿಗಾಗಿ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ನ ಮಾರುಕಟ್ಟೆ ವ್ಯವಸ್ಥಾಪಕ ಅಬ್ದುಲ್‌ ಗಫೂರ (ಮೊ.79944 35507) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.