ADVERTISEMENT

ಚಿಂಚೋಳಿ: ವಿಜಯ ದಶಮಿ ನಿಮಿತ್ತ ತುಳಜಾಪುರಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 16:04 IST
Last Updated 12 ಅಕ್ಟೋಬರ್ 2024, 16:04 IST
ಚಿಂಚೋಳಿ ತಾಲ್ಲೂಕು ಛತ್ರಪತಿ ಶಿವಾಜಿ ಯುವಕ ಸಂಘದ ಕಾರ್ಯಕರ್ತರು ಚಿಂಚೋಳಿ ಪಟ್ಟಣದಲ್ಲಿ ಅಂಬಾಭವಾನಿ ದೇವಿ ಮಂದಿರದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು
ಚಿಂಚೋಳಿ ತಾಲ್ಲೂಕು ಛತ್ರಪತಿ ಶಿವಾಜಿ ಯುವಕ ಸಂಘದ ಕಾರ್ಯಕರ್ತರು ಚಿಂಚೋಳಿ ಪಟ್ಟಣದಲ್ಲಿ ಅಂಬಾಭವಾನಿ ದೇವಿ ಮಂದಿರದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು   

ಚಿಂಚೋಳಿ: ಪಟ್ಟಣದ ಛತ್ರಪತಿ ಶಿವಾಜಿ ಯುವಕ ಸಂಘದಿಂದ ತುಳಜಾಪುರಕ್ಕೆ ಶನಿವಾರ ಪಾದಯಾತ್ರೆ ಕೈಗೊಂಡರು. ಪಟ್ಟಣದ ಎಸ್‌ಬಿಐ ಶಾಖೆಯ ಎದುರಿನ ಜಗದಂಬಾ ದೇವಿ ಮಂದಿರದಲ್ಲಿ ದೇವರಿಗೆ ಪೂಜೆ ಸಲ್ಲಿಸಿ 20 ಯುವಕರು ಪಾದಯಾತ್ರೆ ಆರಂಭಿಸಿದರು.

ಚಿಂಚೋಳಿ ಚಿಮ್ಮನಚೋಡ, ಚಿಟ್ಟಗುಪ್ಪ ಸಸ್ತಾಪುರ ಬಂಗ್ಲಾ, ಉಮ್ಮಾರ್ಗಾ, ನಳದುರ್ಗ ತುಳಜಾಪುರ ಮಾರ್ಗವಾಗಿ ತುಳಜಾಪುರ ತಲುಪುವರು.

ಶನಿವಾರದಿಂದ ಪ್ರತಿದಿನ 30ರಿಂದ 40 ಕಿ.ಮೀ. ನಡಿಗೆ ಮೂಲಕ ಕ್ರಮಿಸಿ ಹುಣ್ಣಿಮೆಯ ದಿನ ತುಳಜಾಪುರ ತಲುಪಿ ಅಂಬಾ ಭವಾನಿ ದೇವಿಯ ದರ್ಶನ ಮಾಡುವರು ಎಂದು ಸಂಘದ ಅಧ್ಯಕ್ಷ ವಸಂತ ಇಟಗಿ ತಿಳಿಸಿದರು.

ADVERTISEMENT

ಸಂಘದ ಸದಸ್ಯರಿಗೆ ಇದು 11ನೇ ಪಾದಯಾತ್ರೆಯಾಗಿದ್ದು, ಯುವಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಪಾದಯಾತ್ರೆಗೆ ತೆರಳಲು ಬಯಸಿದವರಿಗೆ ಮಾತ್ರ ಕರೆದೊಯ್ಯುತ್ತಾರೆ. ಯುವಕರ ಹಾಸಿಗೆ, ಹೊದಿಕೆ ಮತ್ತು ಅಗತ್ಯ ವಸ್ತುಗಳನ್ನು ವಾಹನದಲ್ಲಿ ತುಂಬಿದ್ದು, ಮೊದಲ ದಿನ ಇವರೊಂದಿಗೆ ಬಿಡುವ ವಾಹನ ರಾತ್ರಿ ತಂಗುವ ಸ್ಥಳಕ್ಕೆ ಹೋಗಿ ನಿಂತು ಅಡುಗೆ ಸಿದ್ಧತೆ ನಡೆಸುತ್ತಾರೆ. ರಾತ್ರಿ ಅಲ್ಲಿಗೆ ಬರುವ ಯುವಕರಿಗೆ ಊಟ ಮಾಡಿಸಿ, ರಾತ್ರಿ ಕಳೆದು ಮತ್ತೆ ಬೆಳಿಗ್ಗೆ ಸ್ನಾನ ಮಾಡಿಕೊಂಡು ಅಲ್ಲಿಂದ ಮುಂದಡಿಯಿಡುತ್ತಾರೆ. ಹೀಗೆ 5 ದಿನ ಯಾತ್ರೆ ನಡೆಯುತ್ತದೆ. ದೇವಿಯ ದರ್ಶನವಾದ ನಂತರ ವಾಹನಗಳಲ್ಲಿ ಒಟ್ಟಿಗೆ ಮರಳುತ್ತಾರೆ. ಚನ್ನಪ್ಪ ಭಾಲಿ, ಜಗನ್ನಾಥ ರುದ್ತಂಪುರ, ಸಿದ್ದು ಓಲಗಿರಿ, ಶಂಕರ ಟಪ್ಪದ್, ಶರಣು ಮೇದಾ, ಆಕಾಶ ಶರ್ಮಾ, ಮಹಾದೇವ ಸಿಂಧೆ, ಮಹೇಶ ಜಾನಕಿ ಸೇರಿದಂತೆ 20 ಯುವಕರು ಯಾತ್ರೆಯಲ್ಲಿದ್ದಾರೆ.

ಚಿಂಚೋಳಿ ತಾಲ್ಲೂಕು ಛತ್ರಪತಿ ಶಿವಾಜಿ ಯುವಕ ಸಂಘದ ಕಾರ್ಯಕರ್ತರು ಚಿಂಚೋಳಿ-ತುಳಜಾಪುರಕ್ಕೆ ಶನಿವಾರ ಪಾದಯಾತ್ರೆ ಆರಂಭಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.