ADVERTISEMENT

‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’: ಕಲಬುರಗಿ ವಲಯದ ಸ್ಪರ್ಧೆ ಡಿ. 9ಕ್ಕೆ

‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ಗೆ ನೋಂದಣಿ ಆರಂಭ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:46 IST
Last Updated 26 ನವೆಂಬರ್ 2024, 4:46 IST
ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ ಲೋಗೊ
ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ ಲೋಗೊ   

ಕಲಬುರಗಿ: ಶಾಲಾ ವಿದ್ಯಾರ್ಥಿಗಳು ಭಾಗವಹಿಸಲು ಕಾತರದಿಂದ ಕಾಯುತ್ತಿರುವ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ಗೆ ಕ್ಯೂಆರ್‌ಕೋಡ್‌ ಸ್ಕ್ಯಾನ್‌ ಮಾಡಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ಡಿಸೆಂಬರ್‌ 9ರಂದು ಬೆಳಿಗ್ಗೆ 9ರಿಂದ ಕಲಬುರಗಿ ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ವಲಯಮಟ್ಟದ ಸ್ಪರ್ಧೆ ನಡೆಯಲಿದೆ.

ವಿದ್ಯಾರ್ಥಿಗಳು ಹೊಸತನವನ್ನು ಕಲಿಯಲಿ ಹಾಗೂ ಆರೋಗ್ಯಕರ ಸ್ಪರ್ಧೆಯ ಮೂಲಕ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಲಿ ಎಂಬ ಉದ್ದೇಶದಿಂದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ ಆಯೋಜಿಸಲಾಗಿದೆ. 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧೆಯ ದಿನದಂದು ಸ್ಥಳದಲ್ಲೂ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಒಂದು ಶಾಲೆಯಿಂದ ಎಷ್ಟು ತಂಡಗಳು ಬೇಕಾದರೂ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ತಮಗೆ ಸಮೀಪವಾಗುವ ವಲಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರವೇಶ ಉಚಿತವಾಗಿದೆ.

ಕಲಬುರಗಿ, ಮೈಸೂರು, ಧಾರವಾಡ, ಬಾಗಲಕೋಟೆ, ದಾವಣಗೆರೆ ಹಾಗೂ ಬೆಂಗಳೂರು ವಲಯಗಳಲ್ಲಿ ಮೊದಲ ಹಂತದ ಸ್ಪರ್ಧೆ ನಡೆಯಲಿದೆ. ವಲಯಮಟ್ಟದಲ್ಲಿ ಗೆಲುವು ಸಾಧಿಸಿದವರು ಬೆಂಗಳೂರಿನಲ್ಲಿ ನಡೆಯುವ ಫಿನಾಲೆಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ವಲಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ತಂಡಕ್ಕೆ ನಗದು ಬಹುಮಾನ ನೀಡಲಾಗುತ್ತದೆ.

ADVERTISEMENT

ಪ್ರಕ್ರಿಯೆ: ವಿದ್ಯಾರ್ಥಿಗಳು ಶಾಲೆಗಳ ಮೂಲಕ ತಂಡವಾಗಿ ನೋಂದಾಯಿಸಿಕೊಳ್ಳಬೇಕು. ತಂಡಗಳಿಗೆ ಪ್ರಾಥಮಿಕ ಹಂತದ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಲಯದಲ್ಲಿ 6 ಅಗ್ರ ತಂಡಗಳು ವಲಯ ಮಟ್ಟದ ಅಂತಿಮ ಹಂತಕ್ಕೆ ತಲುಪುತ್ತವೆ. ಆರು ವಲಯಗಳ ವಿಜೇತರು ರಾಜ್ಯಮಟ್ಟದ ಫಿನಾಲೆಗೆ ಅರ್ಹತೆ ಪಡೆಯುತ್ತಾರೆ.

ಅಂತಿಮ ಹಂತದ ಎಲ್ಲ ಸ್ಪರ್ಧಿಗಳಿಗಾಗಿ ‘ಅನ್ವೇಷಣಾ ಕಾರ್ಯಾಗಾರ’ ನಡೆಸಲಾಗುವುದು. ಈ ಕಾರ್ಯಾಗಾರದಲ್ಲಿ ಸಮೃದ್ಧ ಕಲಿಕೆಯ ಅನುಭವ ಪಡೆಯಬಹುದು. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹೊರಹೊಮ್ಮಲು ಈ ಕಾರ್ಯಾಗಾರವು ಹೊಸ ವೇದಿಕೆಯನ್ನು ಕಲ್ಪಿಸಲಿದೆ.

ಹೆಸರು ನೋಂದಾಯಿಸಿಕೊಳ್ಳಲು ಕ್ಯೂಆರ್‌ಕೋಡ್‌ ಸ್ಕ್ಯಾನ್‌ ಮಾಡಿ ಅಥವಾ www.prajavani.net/pvquiz-2024 ವೆಬ್‌ಸೈಟ್‌ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗೆ ಮೊ: 7338018541 ಸಂಪರ್ಕಿಸಬಹುದು.

ಹೆಸರು ನೋಂದಣಿಗೆ ಸ್ಕ್ಯಾನ್‌ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.