ADVERTISEMENT

ಆಳಂದ: ಕಾರಹುಣ್ಣಿಮೆ ಹಬ್ಬದ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:09 IST
Last Updated 20 ಜೂನ್ 2024, 7:09 IST
ಆಳಂದ ಪಟ್ಟಣದಲ್ಲಿ ಕಾರಹುಣ್ಣಿಮೆ ಹಬ್ಬದ ಪ್ರಯುಕ್ತ ಎತ್ತುಗಳ ಅಲಂಕಾರಿಕ ಸಾಮಗ್ರಿಗಳ ಮಾರಾಟಗಾರರು ಮಳಿಗೆ ತೆರದ ದೃಶ್ಯ
ಆಳಂದ ಪಟ್ಟಣದಲ್ಲಿ ಕಾರಹುಣ್ಣಿಮೆ ಹಬ್ಬದ ಪ್ರಯುಕ್ತ ಎತ್ತುಗಳ ಅಲಂಕಾರಿಕ ಸಾಮಗ್ರಿಗಳ ಮಾರಾಟಗಾರರು ಮಳಿಗೆ ತೆರದ ದೃಶ್ಯ   

ಆಳಂದ: ‘ಮಳೆಗಾಲ ಪ್ರಾರಂಭವಾಗಿದ್ದು ಜಲ ಮೂಲಗಳ ಸ್ವಚ್ಛತೆ ಕಾಪಾಡುವುದು ಅವಶ್ಯ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸಾಧ್ಯವಾಗುತ್ತದೆ’ ಎಂದು ಟಿಎಚ್‌ಒ ಡಾ. ಮಹಮದ್ ಗಫಾರ್ ತಿಳಿಸಿದರು.

ಈ ವರ್ಷ ಮುಂಗಾರು ಮಳೆಯು ಉತ್ತಮವಾಗಿದ್ದು ರೈತರಲ್ಲಿ ಹರ್ಷ ಮೂಡಿಸಿದೆ. ಈಗಾಗಲೇ ಬಿತ್ತನೆಯೂ ಭರದಿಂದ ಸಾಗಿದೆ. ತಾಲ್ಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಶುಕ್ರವಾರ ಕಾರಹುಣ್ಣಿಮೆಯ ಆಚರಣೆ ಮಾಡಲಾಗುವುದು. ಅದರಿಂದ ಆಳಂದ ಪಟ್ಟಣದ ಗಣೇಶ ಚೌಕ್‌ ಮಾರ್ಗದಲ್ಲಿ ನೆರೆಯ ಮಹಾರಾಷ್ಟ್ರದ ಲಾತೂರು, ಉಮರ್ಗಾ, ಸೋಲಾಪುರದಿಂದ ಬಂದ ಮಾಲೀಕರು ಅಲಂಕಾರಿಕ ಸಾಮಗ್ರಿಗಳ ಮಳಿಗೆಗಳನ್ನು ತೆರೆದಿದ್ದಾರೆ.

ಬಣ್ಣಬಣ್ಣದ ನುಲಿನ ಗೋಂಡ್ಯಾ, ಮತಾಟಿ, ಆಟೇಕ, ಮಗಡಾ, ಬಾರಕೋಲು, ಹಗ್ಗ, ಮುಗದಾರ ಸೇರಿದಂತೆ ರಾಸುಗಳ ಕೊಡು ಸಿಂಗರಿಸುವ ರಸಾಯನಿಕ ಬಣ್ಣಗಳು ಕಣ್ಮನ ಸೆಳೆಯುತ್ತಿವೆ.

ADVERTISEMENT

ಬೆಲೆ ಏರಿಕೆ: ಕಾರಹುಣ್ಣಿಮೆಗೆ ಎತ್ತು, ಹೋರಿಗಳನ್ನು ಸಿಂಗರಿಸುವ ವಿವಿಧ ಸಾಮಗ್ರಿಗಳ ಬೆಲೆ ಈ ಬಾರಿ ಅಧಿಕವಾಗಿದೆ. ನೂಲಿನ ಹಗ್ಗದ ₹200,  ಜೋಡಿ ಮತಾಟಿಗೆ ₹160, ವಾರ್ನೇಸ್‌ ಬಣ್ಣಕ್ಕೆ ₹80 ಇದ್ದು ಬಹುತೇಕ ಸಮಗ್ರಿಗಳ ಬೆಲೆ ಏರಿಕೆಯಾಗಿದೆ ಎಂದು ರೈತ ಸಿದ್ದು ವೇದಶೇಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.