ADVERTISEMENT

ಕಲಬುರಗಿ: ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 7:43 IST
Last Updated 8 ಆಗಸ್ಟ್ 2024, 7:43 IST
<div class="paragraphs"><p>ಕಲಬುರಗಿ ಜಿಲ್ಲಾಧಿಕಾರಿ ‌ಕಚೇರಿ‌ ಎದುರು ರಸ್ತೆ ಸಂಚಾರ‌ ತಡೆದು ಪ್ರತಿಭಟನೆ‌ ನಡೆಸಲಾಯಿತು</p></div>

ಕಲಬುರಗಿ ಜಿಲ್ಲಾಧಿಕಾರಿ ‌ಕಚೇರಿ‌ ಎದುರು ರಸ್ತೆ ಸಂಚಾರ‌ ತಡೆದು ಪ್ರತಿಭಟನೆ‌ ನಡೆಸಲಾಯಿತು

   

ಕಲಬುರಗಿ: ಜಿಲ್ಲೆಯಲ್ಲಿರುವ ರೇಣುಕಾ ಶುಗರ್ಸ್ ಸಕ್ಕರೆ ಕಾರ್ಖಾನೆ ಹಾಗೂ ಕೆಪಿಆರ್ ಚಿಣಮಗೇರಾ ಸಕ್ಕರೆ ಕಾರ್ಖಾಬೆ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ರೈತರ ಕಬ್ಬಿನ ಬಾಕಿ ಬಿಲ್ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ‌ಕಚೇರಿ ಎದುರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತನಕ ಸಾಗಿತು. ಬಳಿಕ ಪ್ರತಿಭಟನಕಾರರು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾಧಿಕಾರಿ ‌ಕಚೇರಿ ಆವರಣ ಪ್ರವೇಶಿಸಲು ನಿರಾಕರಿಸಿದ ಪ್ರತಿಭಟನಕಾರರು ರಸ್ತೆಯಲ್ಲಿ‌ ಮಾನವ ಸರಪಳಿ‌‌ ನಿರ್ಮಿಸಿ, ಬಳಿಕ ರಸ್ತೆಯಲ್ಲಿ‌ ಕುಳಿತು ಧರಣಿ‌ ನಡೆಸಿದರು.

ಇದರಿಂದ ಸರ್ದಾರ್ ‌ಪಟೇಲ್ ವೃತ್ತದಿಂದ ಜಗತ್ ವೃತ್ತದ ಕಡೆಗೆ ಸಾಗುವ ಮಾರ್ಗದ ಎರಡೂ ಬದಿಯಲ್ಲಿ‌ ವಾಹನಗಳ‌ ಸಂಚಾರ ತಡೆದಿದ್ದರಿಂದ ವಾಹನಗಳ ಸವಾರರು ಪರದಾಡಿದರು.

15 ನಿಮಿಷಗಳ ಬಳಿಕ ಪೊಲೀಸರು‌ ಪ್ರತಿಭಟನಕಾರರ ಮನವೊಲಿಸಿ ಒಂದು‌ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

'ರೈತರು ಸುಮ್ಮನೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲ್ಲ. ಅನ್ಯಾಯ ಆದಾಗಲೇ ಅನ್ನದಾತರು ರಸ್ತೆಗೆ ಇಳಿಯುತ್ತಾರೆ. ನ್ಯಾಯ ಸಿಗುವ ತನಕ ಹೋರಾಟ ಬಿಡುವ‌ ಪ್ರಶ್ನೆಯೇ ಇಲ್ಲ' ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.