ಕಲಬುರ್ಗಿ: ಪಿಎಸ್‍ಐ ನೇಮಕಾತಿಗಾಗಿ ನಗರದಲ್ಲಿ ಈಚೆಗೆ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಗರ್ಭಿಣಿಯೊಬ್ಬರು ಪಾಲ್ಗೊಂಡಿದ್ದರು.
ಎರಡೂವರೆ ತಿಂಗಳ ಗರ್ಭಿಣಿಯಾದ ಅಶ್ವಿನಿ (24) ಈ ಸಾಹಸ ಮಾಡಿದವರು. ಎಂಜಿನಿಯರಿಂಗ್ ಪದವೀಧರೆಯಾದ ಇವರು, ಪಿಎಸ್ಐ ಆಗಲು ಉತ್ಸಾಹ ಹೊಂದಿದ್ದರು. ಈ ಬಾರಿ ನೇಮಕಾತಿ ಅವಕಾಶ ಕಳೆದುಕೊಳ್ಳಬಾರದೆಂದು ದೈಹಿಕ ಸಾಮರ್ಥ್ಯ ಪರೀಕ್ಷೆಗಳಾದ ಓಟ, ಉದ್ದಜಿಗಿತ, ಗುಂಡು ಎಸೆತಗಳಲ್ಲಿಯೂ ಅವರು ತಮ್ಮ ಸಾಮರ್ಥ್ಯ ದೃಢಪಡಿಸಿದರು.
‘ಪೊಲೀಸ್ ನೇಮಕಾತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಗರ್ಭಿಣಿಗೆ ಅವಕಾಶವಿಲ್ಲ. ಆದರೆ, ಅಶ್ವಿನಿ ಅವರು ಯಾರ ಗಮನಕ್ಕೂ ತರದೇ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಇದೆ. ಪರಿಶೀಲಿಸಲಾಗುವುದು’ ಎನ್ನುವುದು ಪೊಲೀಸ್ ಅಧಿಕಾರಿಗಳ ಹೇಳಿಕೆ.
ಅರ್ಹತಾ ಪರೀಕ್ಷೆ ಮುಗಿಸಿದ ಬಳಿಕ ಅಶ್ವಿನಿ ಅವರು ಮತ್ತೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದು, ಅವರ ಆರೋಗ್ಯದಲ್ಲಿ ಏನೂ ಏರುಪೇರಾಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.