ADVERTISEMENT

ಅಕ್ರಮ ಚಟುವಟಿಕೆ: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲೂ ದೂರು ಕೊಡಿ

12 ಪೊಲೀಸ್‌ ಠಾಣೆಗಳ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ, ವಾಟ್ಸ್‌ಆ್ಯಪ್‌ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 2:17 IST
Last Updated 1 ಜೂನ್ 2021, 2:17 IST
ವೈ.ಎಸ್.ರವಿಕುಮಾರ್
ವೈ.ಎಸ್.ರವಿಕುಮಾರ್   

ಕಲಬುರ್ಗಿ: ನಗರದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ನಗರ ಪೊಲೀಸ್‌ ಕಮಿಷನರ್‌ ವೈ.ಎಸ್‌. ರವಿಕುಮಾರ್‌ ಅವರು, ದೂರು ನೀಡಲು ಜನರಿಗೆ ಸುಲಭವಾಗುವಂತೆ ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು ಸಿದ್ಧಪಡಿಸಿದ್ದಾರೆ.

ಕಮಿಷನರೇಟ್‌ ವ್ಯಾಪ್ತಿಗೆ ಬರುವ ಎಲ್ಲ 12 ಪೊಲೀಸ್‌ ಠಾಣೆಗಳ ಹೆಸರಿನಲ್ಲಿಯೂ ಪ್ರತ್ಯೇಕ ಫೇಸ್‌ಬುಕ್‌ ಖಾತೆಗಳನ್ನು ತೆರೆಯ
ಲಾಗಿದ್ದು, ಅವುಗಳನ್ನು ಮಾನಿಟರ್‌ ಮಾಡಲು ಸಿಬ್ಬಂದಿ ನಿಯೋಜಿಸಲಾಗಿದೆ.

ಆಯಾ ಪೊಲೀಸ್‌ ಠಾಣೆಯ ಹೆಸರಿನಲ್ಲೇ ಈ ಫೇಸ್‌ಬುಕ್‌ ಖಾತೆಗಳೂ ಇವೆ. ಉದಾಹರಣೆಗೆ ಬ್ರಹ್ಮಪುರ ಪೊಲೀಸ್‌ ಠಾಣೆ ‘Brahmapur Police Station Kalaburag city’, ರೋಜಾ ಪೊಲೀಸ್‌ ಠಾಣೆ ‘Roza Police Station Kalaburag city’ ಹೀಗೆ ಯಾವುದೇ ಠಾಣೆಯ ಹೆಸರನ್ನು ಫೇಸ್‌ಬುಕ್‌ನಲ್ಲಿ ಸರ್ಚ್‌ ಮಾಡಿ, ಮುಂದೆ ‘ಕಲಬುರ್ಗಿ ಸಿಟಿ’ ಟೈಪಿಸಿದರೆ ಈ ಖಾತೆ ಸಿಗುತ್ತದೆ. ಅದರ ಇನ್‌ಬಾಕ್ಸ್‌ಗೆ ದೂರು ಅಥವಾ ಮಾಹಿತಿ ಸಲ್ಲಿಸಬಹುದು.

ADVERTISEMENT

ಇದಲ್ಲದೇ, ಪ್ರತಿ ಠಾಣೆಗೂ ಒಂದೊಂದು ಸಂರ್ಪಕ ಸಂಖ್ಯೆ ಇರುವ ಜತೆಗೇ ಒಂದೊಂದು ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನೂ ನೀಡಿದ್ದಾರೆ. ಸಾರ್ವಜನಿಕರು ನಗರ ವ್ಯಾಪ್ತಿಯಲ್ಲಿ ಎಲ್ಲೇ ಅಕ್ರಮ, ಅನೈತಿಕ ಅಥವಾ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ; ಈ ವಾಟ್ಸ್‌ಆ್ಯಪ್‌ ಸಂಖ್ಯೆಗಳಿಗೆ ದೂರು ಕಳುಹಿಸಬಹುದು.

ರವಿಕುಮಾರ್‌ ಅವರ ಸಲಹೆ ಮೇರೆಗ ಡಿಸಿಪಿ ಕಿಶೋರಬಾಬು ಅವರು, ಎಲ್ಲ ಠಾಣೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಇದನ್ನು ಜಾರಿ ಮಾಡಿದ್ದಾರೆ.

‘ಬೆಂಗಳೂರು, ಮಂಗಳೂರು, ಮೈಸೂರು ಇನ್ನಿತರ ಮಹಾನಗರಗಳಲ್ಲಿ ಇಂತಹ ಪ್ರಯೋಗವನ್ನು ಈಗಾಗಲೇ ಪೊಲೀಸರು ಮಾಡುತ್ತಿದ್ದಾರೆ. ಅದನ್ನೇ ಕಲಬುರ್ಗಿ ನಗರದಲ್ಲಿಯೂ ಆರಂಭಿಸಿದ್ದೇವೆ’ ಎಂದು ಡಿಸಿಪಿ ಕಿಶೋರ ಬಾಬು ತಿಳಿಸಿದ್ದಾರೆ.

ಇದಲ್ಲದೇ, ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಎಆರ್‍ಎಸ್‍ಎಸ್ ಸೇವೆಯನ್ನು ಆರಂಭಿಸಲಾಗಿದೆ. ‘112’ ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸರ ನೆರವು ಪಡೆಯಬಹುದು’ ಎಂದೂ ಅವರು ತಿಳಿಸಿದ್ದಾರೆ.

ಪಟ್ಟಿ

ಪೊಲೀಸ್‌ಠಾಣೆ; ವಾಟ್ಸ್‌ಆ್ಯಪ್‌ ಸಂಖ್ಯೆ‌

ಸ್ಟೇಷನ್‌ ಬಜಾರ್‌; 9480803546

ಅಶೋಕನಗರ; 9480803545

ಬ್ರಹ್ಮಪುರ ಠಾಣೆ; 9480803547

ಆರ್‌.ಜಿ.ನಗರ; 9480803548

ಚೌಕ್ ಠಾಣೆ; 9480803549

ಎಂ.ಬಿ ನಗರ; 9480803551

ರೋಜಾ ಠಾಣೆ; 9480803550

ಗ್ರಾಮೀಣ ಠಣೆ; 9480803553

ವಿ.ವಿ ಠಾಣೆ; 9480803552

ಫರಹತಾಬಾದ್‌; 9480803559

ಸಂಚಾರ ಠಾಣೆ–1; 9480803555

ಸಂಚಾರ ಠಾಣೆ–2; 9480803554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.