ADVERTISEMENT

ದೀಪಾವಳಿಗೆ ಬೆಂಗಳೂರು–ಕಲಬುರಗಿ ನಡುವೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 16:34 IST
Last Updated 14 ಅಕ್ಟೋಬರ್ 2024, 16:34 IST

ಕಲಬುರಗಿ: ದೀಪಾವಾಳಿಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಕಲಬುರಗಿ–ಬೆಂಗಳೂರು ನಡುವೆ ತಲಾ ಎರಡು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲು ಓಡಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ.

ಈ ವಿಶೇಷ ರೈಲು ತಲಾ 19 ಬೋಗಿಗಳನ್ನು ಹೊಂದಿರಲಿದ್ದು, ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಹಾಗೂ ಕಲಬುರಗಿ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿದೆ.

ಬೆಂಗಳೂರಿನಿಂದ ಈ ವಿಶೇಷ ರೈಲು (06533) ಅ.30 ಹಾಗೂ ನ.2ರಂದು ರಾತ್ರಿ 9.15ಕ್ಕೆ ಹೊರಡಲಿದ್ದು, ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್‌ ಮೂಲಕ ಮರುದಿನ ಬೆಳಿಗ್ಗೆ 7.40ಕ್ಕೆ ಕಲಬುರಗಿ ತಲುಪಲಿದೆ.

ADVERTISEMENT

ಕಲಬುರಗಿಯಿಂದ ಈ ರೈಲು(06534) ಅ.31 ಹಾಗೂ ನ.3ರಂದು ರಾತ್ರಿ 8 ಗಂಟೆಗೆ ಹೊರಟು ಶಹಾಬಾದ್‌, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಆದೋನಿ, ಗುಂತಕಲ್‌, ಅನಂತಪುರ, ಧರ್ಮಾವರಂ, ಯಲಹಂಕ ಮೂಲಕ ಮರುದಿನ ಬೆಳಿಗ್ಗೆ 9.35ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.