ADVERTISEMENT

ಚಿತ್ತಾಪುರ: ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:19 IST
Last Updated 30 ಜೂನ್ 2024, 14:19 IST
ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಸಂಜೆ ಮಳೆ ಸುರಿಯಿತು
ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಸಂಜೆ ಮಳೆ ಸುರಿಯಿತು   

ಚಿತ್ತಾಪುರ: ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ಮಳೆಗಾಗಿ ಕಾಯುತ್ತಿದ್ದ ಮುಂಗಾರು ಬೆಳೆಗಳಿಗೆ ಫಲದಾಯಕವಾಗಿದ್ದು, ರೈತರ ಮೊಗದಲ್ಲಿ ಹರ್ಷ ಮೂಡಿದೆ.

ಶನಿವಾರ ರಾತ್ರಿ ರಭಸವಾದ ಗಾಳಿಯೊಂದಿಗೆ ಜಿಟಿಜಿಟಿ ಮಳೆಯಾಗಿದೆ. ಭಾನುವಾರ ಮತ್ತೆ ಮಳೆ ಬಂದಿದ್ದರಿಂದ ಹೊಲಗಳಲ್ಲಿ ತೇವಾಂಶ ವೃದ್ಧಿಯಾಗಿ ಹೆಸರು, ಉದ್ದು, ತೊಗರಿ ಬೆಳೆಗಳಿಗೆ ಉಪಯುಕ್ತವಾಗಿದೆ. ಮಳೆ ಬಾರದೆ ರೈತರು ಮುಂಗಾರು ಬೆಳೆ ತೊಗರಿ ಬಿತ್ತನೆ ಸ್ಥಗಿತಗೊಳಿಸಿದ್ದರು.

ತಾಲ್ಲೂಕಿನ ಮಲಕೂಡ, ದಂಡೋತಿ, ಇವಣಿ, ಬೆಳಗುಂಪಾ, ಭಾಗೋಡಿ, ಕದ್ದರಗಿ, ಮುಡಬೂಳ, ಮರಗೋಳ, ಮೊಗಲಾ, ದಿಗ್ಗಾಂವ, ಸಾತನೂರು, ಹೊಸೂರು, ಡೋಣಗಾಂವ, ರಾಜೋಳಾ, ರಾಮತೀರ್ಥ, ಭೀಮನಹಳ್ಳಿ, ಅಲ್ಲೂರ್(ಕೆ), ಅಲ್ಲೂರ್(ಬಿ) ಬೆಳಗೇರಾ, ಯಾಗಾಪುರ, ದಂಡಗುಂಡ, ಸಂಕನೂರು, ಅಳ್ಳೊಳ್ಳಿ, ಕರದಾಳ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.