ADVERTISEMENT

ಕಲಬುರಗಿ, ಯಾದಗಿರಿಯಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 19:34 IST
Last Updated 14 ಜೂನ್ 2024, 19:34 IST
ಸತತ ಮಳೆಯಿಂದಾಗಿ ಭರ್ತಿ ಹಂತ ತಲುಪಿರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯ
ಸತತ ಮಳೆಯಿಂದಾಗಿ ಭರ್ತಿ ಹಂತ ತಲುಪಿರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯ   

ಕಲಬುರಗಿ: ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆ ಸುರಿದಿದ್ದು, ಜಿಲ್ಲೆಯ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ.

ಕಲಬುರಗಿ ನಗರದಲ್ಲಿ ಸಂಜೆ ಸುಮಾರು ಅರ್ಧಗಂಟೆ ಬಿರುಸಿನ ಮಳೆಯಾಯಿತು. ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯಕ್ಕೆ 1,500 ಕ್ಯುಸೆಕ್ ಒಳ ಹರಿವು ಇದ್ದು, ಭರ್ತಿಯಾಗಲು ಒಂದು ಮೀಟರ್ ಮಾತ್ರ ಬಾಕಿ ಇದೆ. ಇದೇ ಪ್ರಮಾಣದಲ್ಲಿ ಒಳಹರಿವು ಇದ್ದರೆ ಶನಿವಾರ ಸಂಜೆ ವೇಳೆಗೆ ಜಲಾಶಯದಿಂದ ನೀರನ್ನು ನದಿಗೆ ಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ಸೈದಾಪುರ, ಯರಗೋಳ, ಕೆಂಭಾವಿಯಲ್ಲಿ ಉತ್ತಮ ಮಳೆಯಾಗಿದೆ. 

ADVERTISEMENT

ರಾಯಚೂರು ಜಿಲ್ಲೆಯ ಕವಿತಾಳ, ಸಿರಿವಾರ, ಮಾನ್ವಿ, ಮಸ್ಕಿ ಹಾಗೂ ಹಟ್ಟಿಚಿನ್ನದಗಣಿ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.