ವಾಡಿ: ‘ಹಲಕರ್ಟಿಯ ರಂಭಾಪುರಿ ಶಾಖಾಮಠ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯರನ್ನು ವೀರಭದ್ರೇಶ್ವರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡೆಗಣಿಸಿದ್ದು ಜಾತ್ರಾ ಉತ್ಸವಕ್ಕೆ ಅಪಚಾರ ಮಾಡಿದಂತಾಗಿದೆ’ ಎಂದು ಮುಖಂಡ ಮಲ್ಲಣ್ಣ ಸಂಗಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ‘ಏ.19ರಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಸಿದ್ದೇಶ್ವರ ಧ್ಯಾನಧಾಮವಾಗಿದ್ದ ಮಠಕ್ಕೆ ಹಲವು ಮಠಾಧೀಶರ ಸಮ್ಮುಖದಲ್ಲಿ ರಂಭಾಪುರಿ ಶಾಖಾ ಮಠವನ್ನಾಗಿ ಮಾಡಿ ಶಿವಾಚಾರ್ಯ ಪಟ್ಟ ಕಟ್ಟಿದ್ದಾರೆ. ವೀರಭದ್ರೇಶ್ವರ ದೇವಸ್ಥಾನ ನೇರವಾಗಿ ರಂಭಾಪುರಿ ಪೀಠಕ್ಕೆ ಒಳಪಡುತ್ತಿದ್ದು ರಂಭಾಪುರಿಯ ಶಾಖಾಮಠದ ಶಿವಾಚಾರ್ಯವಾಗಿರುವ ಸ್ಥಳೀಯ ರಾಜಶೇಖರ ಶಿವಾಚಾರ್ಯರಿಗೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಬೇಕಾಗಿತ್ತು. ಆದರೆ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅವರಿಗೆ ಗೌರವಸ್ಥಾನ ಹಾಗೂ ಆಮಂತ್ರಣ ನೀಡದೇ ಅವಮಾನ ಮಾಡಿದ್ದು ಸರಿಯಾದ ಕ್ರಮವಲ್ಲ. ಇದು ದೇವಸ್ಥಾನದ ಸಹಸ್ರಾರು ಭಕ್ತರ ಭಾವನೆಗೆ ಧಕ್ಕೆ ತಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.